ಲಂಡನ್: ಅಮೆರಿಕದ ಖ್ಯಾತ ನಿರೂಪಕಿ ಓಪ್ರಾ ವಿನ್ಫ್ರೇ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಮರ್ಕೆಲ್ ಅವರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿರುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಬ್ರಿಟನ್ನ ಬಕಿಂಗ್ಹ್ಯಾಮ್ ಅರಮನೆ ಮೌನಕ್ಕೆ ಶರಣಾಗಿದೆ.

ಈ ಸಂಬಂಧ ಬ್ರಿಟನ್ನ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನೂ ಪ್ರತಿಕ್ರಿಯಿಸಲು ಅಲ್ಲಿನ ಮಾಧ್ಯಮಗಳು ಕೋರಿವೆ.

‘ಸಂದರ್ಶನದ ಕುರಿತು ಅರಮನೆಯ ಹೇಳಿಕೆಯನ್ನು ಸಿದ್ಧಪಡಿಸಲಾಗಿದೆ. ಆದರೆ, ಅದಕ್ಕೆ ರಾಣಿ ಎಲಿಜಬೆತ್–2 ಅವರು ಇನ್ನೂ ಸಹಿ ಹಾಕಿಲ್ಲ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೇಘನ್ ಅವರ ನುಡಿಗಳು ರಾಜಮನೆತನವನ್ನು ಇಕ್ಕಟ್ಟಿಗೆ ಸಿಲುಕಿಸಿವೆ’ ಎಂದು ಬ್ರಿಟನ್ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಇದನ್ನೂ ಓದಿ:ಬ್ರಿಟಿಷ್ ರಾಜಮನೆತನದಲ್ಲಿ ಉಂಡ ನೋವು ಹೇಳಿಕೊಂಡ ರಾಜಕುಮಾರ ಹ್ಯಾರಿ ಪತ್ನಿ ಮೇಘನ್

ಸಂದರ್ಶನದಲ್ಲಿ ಮಾಡಿದ ಆರೋಪಗಳನ್ನು ‘ಬಹಳ ಗಂಭೀರವಾಗಿ ಪರಿಗಣಿಸಬೇಕು’ ಎಂದು ಪ್ರತಿಪಕ್ಷದ ಮುಖಂಡ ಸರ್ ಕೀರ್ ಸ್ಟಾರ್ಮರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.