ಟೊರಂಟೊ: ಭಾರತವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ದೇಶವಾಗಿದ್ದು, ಆ ದೇಶದ ಜೊತೆ ಉತ್ತಮ ಬಾಂಧವ್ಯ ಹೊಂದುವುದನ್ನು ಕೆನಡಾ ಗಂಭೀರವಾಗಿ ಪರಿಗಣಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.

ಹರದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದ ಸತ್ಯಾಂಶಗಳು ಹೊರಬರುವವರೆಗೂ ಕೆನಡಾಕ್ಕೆ ಭಾರತ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು ಅಲ್ಲಿಯ ನ್ಯಾಷನಲ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಖಾಲಿಸ್ತಾನ ಪರ ಹೋರಾಟಗಾದ ನಿಜ್ಜರ್ ಹತ್ಯೆಯ ನಂತರ ಭಾರತ–ಕೆನಡಾ ಸಂಬಂಧದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಟ್ರೂಡೊ ಅವರು ಮಾಂಟ್ರಿಯಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಜಾಗತಿಕವಾಗಿ ಭಾರತದ ಮಹತ್ವ ಹೆಚ್ಚುತ್ತಿದೆ. ಹಾಗಾಗಿ ಆ ದೇಶದ ಜೊತೆ ರಚನಾತ್ಮಕವಾಗಿ ತೊಡಗಿಕೊಳ್ಳುವುದು ಕೆನಡಾಕ್ಕೆ ಮುಖ್ಯವಾಗಿದೆ. ಕಳೆದ ವರ್ಷವಷ್ಟೇ ಕೆನಡಾವು ಹಿಂದೂ ಮಹಾಸಾಗರ– ಪೆಸಿಫಿಕ್ ಕಾರ್ಯತಂತ್ರದ ಭಾಗವಾಗಿದೆ. ಹೀಗಾಗಿ ಭಾರತದ ಜೊತೆ ಉತ್ತಮ ಬಾಂಧವ್ಯ ಸ್ಥಾಪಿಸುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದಿದ್ದಾರೆ.

‘ನಿಜ್ಜರ್ ಹತ್ಯೆಯಲ್ಲಿ ಭಾರತ ಏಜೆಂಟರ ಕೈವಾಡವಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಡಿರುವ ಆರೋಪಗಳನ್ನು ಪರಿಶೀಲಿಸಲು ಭಾರತದ ಸಹಕಾರ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಆ ದೇಶಕ್ಕೆ ಮನಗಾಣಿಸುವ ವಿಚಾರದಲ್ಲಿ ಅಮೆರಿಕವು ಕೆನಡಾದ ಜೊತೆ ಇದೆ’ ಎಂದಿದ್ದಾರೆ.

‘ನಮ್ಮ ಎಲ್ಲಾ ಸಹಭಾಗಿ ದೇಶಗಳೊಡನೆ ನಾವು ಕಾನೂನಿಗೆ ಬದ್ಧವಾಗಿ ಜವಾಬ್ದಾರಿಯುತವಾಗಿ ಹೆಜ್ಜೆ ಇಡುತ್ತಿದ್ದೇವೆ. ಭಾರತದ ಜೊತೆಯೂ ನಾವು ಅದೇ ರೀತಿ ನಡೆದುಕೊಳ್ಳುತ್ತಿದ್ದೇವೆ’ ಎಂದು ಟ್ರೂಡೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.