ವಿಶ್ವಸಂಸ್ಥೆ: ಅಫ್ಗಾನಿಸ್ತಾನದಲ್ಲಿ ಈ ಹಿಂದೆ ಭಾರತವು ಹಲವು ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದ್ದು, ರಾಜಕೀಯ ಪರಿಸ್ಥಿತಿ ಬದಲಾಗಿರುವುದರಿಂದ ಇವುಗಳು ನಿಧಾನಗತಿಯಲ್ಲಿ ಸಾಗಿವೆ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಆರ್. ಮಧುಸೂದನ್, ‘ಅಫ್ಗಾನಿಸ್ತಾನವನ್ನು ಸ್ವಾವಲಂಬಿ ದೇಶವನ್ನಾಗಿಸುವ ದೃಷ್ಟಿಯಿಂದ ಅಲ್ಲಿನ ಎಲ್ಲಾ 34 ಪ್ರಾಂತ್ಯಗಳ ಜನ ಕೇಂದ್ರಿತ ಯೋಜನೆಗಳಲ್ಲಿ ಭಾರತದ ಅಭಿವೃದ್ಧಿ ಪಾಲುದಾರಿಕೆ ಇತ್ತು ಮತ್ತು ಅಲ್ಲಿಗೆ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ವಾಯುಮಾರ್ಗದ ಮೂಲಕ ಸರಕು ಸಾಗಣೆಗಾಗಿ ಕಾರಿಡಾರ್ ಮತ್ತು ಚಬಾಹರ್ ಬಂದರನ್ನು ಕಾರ್ಯಗತಗೊಳಿಸಿತ್ತು’ ಎಂದಿದ್ದಾರೆ.

‘ಆಡಳಿತವು ತಾಲಿಬಾನ್ ಕೈವಶವಾಗಿರುವುದು ಸೇರಿದಂತೆ ಹಲವು ಕಾರಣಗಳಿಂದ ಯೋಜನೆಗಳು ನಿಧಾನಗತಿಯಲ್ಲಿ ಸಾಗಿದರೂ ಅಫ್ಗಾನಿಸ್ತಾನದ ಜನರಿಗೆ ಸಹಾಯ ಮಾಡುವ ಭಾರತದ ಬದ್ಧತೆ ಅಚಲವಾಗಿದೆ’ ಎಂದೂ ಹೇಳಿದ್ದಾರೆ.

‘ಅಫ್ಗಾನಿಸ್ತಾನದ ಭದ್ರತಾ ಪರಿಸ್ಥಿತಿಯ ಮೇಲೆ ಭಾರತವು ನಿಗಾ ಇಟ್ಟಿದೆ. ಪ್ರಾರ್ಥನಾ ಕೇಂದ್ರ, ಶಿಕ್ಷಣ ಸಂಸ್ಥೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳನ್ನು ಖಂಡಿಸುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.