ಮಿನ್ನೆಪೊಲಿಸ್: ಕಪ್ಪುವರ್ಣೀಯ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ 22 ವರ್ಷ, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ:ಜಾರ್ಜ್ ಫ್ಲಾಯ್ಡ್ಗೆ ಭಾವಪೂರ್ಣ ವಿದಾಯ: ಮುಂದುವರಿದ ಪ್ರತಿಭಟನೆ

ಮಿನ್ನೆಪೊಲಿಸ್‌ನ ಪೊಲೀಸ್ ಅಧಿಕಾರಿಯಾಗಿದ್ದ ಡೆರಕ್ ಚೌವಿನ್, ಕಳೆದ ವರ್ಷದ ಮೇ 25ರಂದು ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಹತ್ಯೆ ಮಾಡಿದ್ದರು. ಇದು ಅಮೆರಿಕದಲ್ಲಿ ಜನಾಂಗೀಯ ನಿಂದನೆ ವಿರುದ್ಧದ ಹೋರಾಟ ತೀವ್ರವಾಗಲು ಕಾರಣವಾಗಿತ್ತು.

ಈ ಹತ್ಯೆ ನಡೆದ ವರ್ಷದ ನಂತರ ಚೌವಿನ್‌ಗೆ ಶಿಕ್ಷೆ ವಿಧಿಸಲಾಗಿದೆ. ಇದು, ಕಪ್ಪು ವರ್ಣೀಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಧಿಸಲಾದ ದೀರ್ಘ ಜೈಲು ಶಿಕ್ಷೆಯಾಗಿದೆ.

ಇದನ್ನೂ ಓದಿ:ಜಾರ್ಜ್ ಫ್ಲಾಯ್ಡ್ ಅಂತ್ಯಕ್ರಿಯೆ; ನೂರಾರು ಜನರ ಕಂಬನಿ

ಚೌವಿನ್‌ಗೆ ನೀಡಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಫ್ಲಾಯ್ಡ್ ಕುಟುಂಬದ ಸದಸ್ಯರು ಮತ್ತು ಇತರರು ನಿರಾಶೆಗೊಂಡಿದ್ದಾರೆ. ಸರ್ಕಾರದ ಪರ ವಕೀಲರು ಕೋರಿದ 30 ವರ್ಷಗಳ ಶಿಕ್ಷೆಯೂ ಕಡಿಮೆಯಾಗಿದೆ. ಏಕೆಂದರೆ, 45ರ ಹರೆಯದ ಚೌವಿನ್, ತನಗೆ ವಿಧಿಸಿರುವ ಶಿಕ್ಷೆಯ ಮೂರನೇ ಎರಡರಷ್ಟು ಅವಧಿ ಅಥವಾ 15 ವರ್ಷ ಪೂರ್ಣಗೊಂಡ ನಂತರ, ಉತ್ತಮ ನಡವಳಿಕೆ ಆಧಾರದ ಮೇಲೆ ಪರೋಲ್ ಮೇಲೆ ಹೊರಬರುತ್ತಾನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: ₹196.2 ಕೋಟಿ ಪರಿಹಾರಕ್ಕೆ ಒಪ್ಪಿದ ಕುಟುಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.