ಬೀಜಿಂಗ್: ಅಮೆರಿಕ ನೌಕಾಪಡೆಯ ಯುದ್ಧ ವಿಮಾನಗಳು, ಇತರೆ ಯುದ್ಧ ಹಡಗುಗಳ ಮಾದರಿಗಳನ್ನು ಚೀನಾ ಸೇನೆಯು, ಅಲ್ಲಿನ ಮರುಭೂಮಿ ಕ್ಸಿನ್ಜಿಯಾಂಗ್ನಲ್ಲಿ ರೂಪಿಸಿದೆ. ತರಬೇತಿ ಗುರಿಯಾಗಿ ಬಳಸುವುದು ಇದರ ಉದ್ದೇಶ ಎನ್ನಲಾಗಿದೆ. ‘ಮಕ್ಸರ್’ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯು ಉಪಗ್ರಹ ಆಧರಿಸಿ ಸೆರೆಹಿಡಿದಿರುವ ಚಿತ್ರಗಳಲ್ಲಿ ಇದು ದೃಢಪಟ್ಟಿದೆ.

ಅಮೆರಿಕದ ನೌಕಾಪಡೆಗೆ ಪ್ರತಿರೋಧ ತೋರುವ ಸಾಮರ್ಥ್ಯ ಹೊಂದುವ ಚೀನಾದ ಯತ್ನ ಈ ಮೂಲಕ ದೃಢಪಟ್ಟಿದೆ. ತೈವಾನ್ ಮತ್ತು ದಕ್ಷಿಣ ಚೀನಾದ ಸಮುದ್ರದ ಭಾಗ ಸಂಬಂಧ ಮೂಡಿರುವ ಆತಂಕದ ಸ್ಥಿತಿ ಹೆಚ್ಚುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಅಮೆರಿಕ ನೌಕಾಪಡೆಯ ಯುದ್ಧ ವಿಮಾನಗಳ ಪೂರ್ಣ ಮಾದರಿ, ಅರ್ಲೀಗ್ ಬರ್ಕ್ ಮಾರ್ಗದರ್ಶಿ ಕ್ಷಿಪಣಿ ಧ್ವಂಸಕದ ಎರಡು ಮಾದರಿಗಳು, 6 ಮೀಟರ್ ಉದ್ದದ ರೈಲು ವ್ಯವಸ್ಥೆ, ಅದರ ಮೇಲೆ ಹಡಗು ಗಾತ್ರದ ನಿರ್ದಿಷ್ಟ ಗುರಿ ಇರುವಂತೆ ಮಾದರಿಯನ್ನು ರೂಪಿಸಲಾಗಿದೆ. ಈ ಸಂಕೀರ್ಣವನ್ನು ಭೂಮಿಯಿಂದ ಭೂಮಿಗೆ ಉಡಾವಣೆ ಮಾಡಬಹುದಾದ ಕ್ಷಿಪಣಿಗಳ ಪ್ರಯೋಗಕ್ಕೆ ಬಳಸಲಾಗುತ್ತಿದೆ ಎಂದು ಜಿಯೊಸ್ಪೆಷಿಯಲ್ ಇಂಟೆಲಿಜೆನ್ಸ್ ಕಂಪನಿಯ ಮೂಲಗಳನ್ನು ಆಧರಿಸಿ ಅಮೆರಿಕದ ನೌಕಾಸಂಸ್ಥೆಯು ತಿಳಿಸಿದೆ.

ಚೀನಾದ ಹಡಗು ನಿರೋಧಕ ಕ್ಷಿಪಣಿ ಕಾರ್ಯಕ್ರಮದ ಉಸ್ತುವಾರಿಯನ್ನು ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿ ರಾಕೆಟ್ ಫೋರ್ಸ್ (ಪಿಎಲ್ಎಆರ್ಎಫ್) ಹೊಂದಿದೆ. ಚೀನಾದ ರಕ್ಷಣಾ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚೀನಾ ಸೇನೆ ಕುರಿತ ಪೆಂಟಗನ್ನ ವರದಿಯ ಅನುಸಾರ, ಪಿಎಲ್ಎಆರ್ಎಫ್ ಸಮುದ್ರ ಭಾಗದಲ್ಲಿ ಜುಲೈ 2020ರಲ್ಲಿ ಮೊದಲಿಗೆ ಪ್ರಯೋಗ ನಡೆಸಿದೆ. ಆಗ ಡಿಎಫ್ 21ನ ಹಡಗು ನಿರೋಧಕ ಕ್ಷಿಪಣಿಗಳನ್ನು ಸ್ಪಾರ್ಟ್ಲಿ ದ್ವೀಪ ಭಾಗದಲ್ಲಿ ನೀರಿನತ್ತ ಉಡಾವಣೆ ಮಾಡಿದೆ.

ಸಮುದ್ರದ ಭಾಗದ ಗಡಿಯನ್ನು ಕುರಿತಂತೆ ಚೀನಾ ದೇಶವು ಸದ್ಯ ತೈವಾನ್ ಮತ್ತು ಏಷಿಯಾ ಪ್ರಾಂತ್ಯದ ಆಗ್ನೇಯ ಭಾಗದ ನಾಲ್ಕು ದೇಶಗಳ ಜೊತೆಗೆ ವಿವಾದವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.