ಬೀಜಿಂಗ್:ಚೀನಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿಇತ್ತೀಚೆಗೆ ಪತನಗೊಂಡಿದ್ದ ವಿಮಾನದ ಎರಡನೇ ಬ್ಲ್ಯಾಕ್ಬಾಕ್ಸ್ ಪತ್ತೆಯಾಗಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

'ಚೀನಾ ಈಸ್ಟರ್ನ್ ಏರ್ಲೈನ್ಸ್ನ 'ಬೋಯಿಂಗ್ 737–800' ವಿಮಾನದಎರಡನೇ ಬ್ಲ್ಯಾಕ್ಬಾಕ್ಸ್ ಮಾರ್ಚ್ 27 ರಂದು ಪತ್ತೆಯಾಗಿದೆ' ಎಂದು 'ಕ್ಸಿನುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ವಿಮಾನದ ಒಂದು ಬ್ಲಾಕ್ಬಾಕ್ಸ್ ಮತ್ತುಪೈಲಟ್ ಕೊಠಡಿಯ ರೆಕಾರ್ಡರ್ ಬುಧವಾರ (ಮಾ.23) ರಂದು ಪತ್ತೆಯಾಗಿತ್ತು.

132 ಮಂದಿ ಇದ್ದ ಬೋಯಿಂಗ್ 737–800 ವಿಮಾನ ನೈರುತ್ಯ ಚೀನಾದ ಯುನಾನ್ ಪ್ರಾಂತ್ಯದ ರಾಜಧಾನಿ ಕುನ್ಮಿಂಗ್ನಿಂದ ಗುವಾಂಗ್ಡಾಂಗ್ ಪ್ರಾಂತ್ಯದ ರಾಜಧಾನಿ ಗುವಾಂಗ್ಝೌ ಕಡೆಗೆ ಸೋಮವಾರ (ಮಾ.21) ಪ್ರಯಾಣ ಬೆಳಸಿತ್ತು. ಆದರೆ,ವುಝೌ ನಗರದ ಸಮೀಪ ಪತನವಾಗಿತ್ತು.ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಮೃತಪಟ್ಟಿದ್ದರು.

ಇದನ್ನೂ ಓದಿ:
*132 ಜನರಿದ್ದ ದೊಡ್ಡ ವಿಮಾನ ಚೀನಾದಲ್ಲಿ ಪತನ: ಚೂರುಚೂರಾಗಿ ಒಡೆದ ಬೋಯಿಂಗ್ 737
*ಚೀನಾ ವಿಮಾನದ ಒಂದು ಬ್ಲ್ಯಾಕ್ಬಾಕ್ಸ್, ರೆಕಾರ್ಡರ್ ಪತ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.