ಬೀಜಿಂಗ್:ಅಮೆರಿಕದೊಂದಿಗಿನ ವಾಣಿಜ್ಯ ಬಿಕ್ಕಟ್ಟು ಮತ್ತಷ್ಟು ಹೆಚ್ಚಾದ ಹಿನ್ನಲೆಯಲ್ಲಿ, ಚೀನಾ ತನ್ನ ಡ್ರೋನ್ ಹಾಗೂ ಲೇಸರ್ ತಂತ್ರಜ್ಞಾನವೂ ಸೇರಿದಂತೆ ಒಟ್ಟು ಎರಡುಡಜನ್‌ನಷ್ಟು ವಿವಿಧ ತಂತ್ರಜ್ಞಾನಗಳನ್ನು ರಫ್ತು ನಿಷೇಧ ಪಟ್ಟಿಗೆ ಸೇರಿಸಿದೆ.

ಬಾಹ್ಯಾಕಾಶಕ್ಕೆ ಸಂಬಂಧಿಸಿದ 23 ವಿವಿಧತಂತ್ರಜ್ಞಾನವನ್ನು ರಫ್ತು ನಿಷೇಧ ಪಟ್ಟಿಗೆ ಸೇರಿಸಿರುವುದಾಗಿ ಚೀನಾಶುಕ್ರವಾರ ಹೇಳಿತ್ತು.

‘ತಂತ್ರಜ್ಞಾನದ ರಫ್ತು ನಿಯಂತ್ರಿಸುವುದು, ವೈಜ್ಞಾನಿಕ, ತಾಂತ್ರಿಕ ಪ್ರಗತಿ, ಆರ್ಥಿಕ ಸುರಕ್ಷತೆ ಮತ್ತು ತಾಂತ್ರಿಕ ಸಹಕಾರವನ್ನು ಉತ್ತೇಜಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದುಚೀನಾದ ವಾಣಿಜ್ಯ ಸಚಿವಾಲಯ ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಚೀನಾದ ಅರ್ಥಶಾಸ್ತ್ರಜ್ಞ ಐರಿಸ್ ಪಾಂಗ್ ಅವರು, ನಿಷೇಧ ಪಟ್ಟಿಯ ಪರಿಷ್ಕರಣೆಯು ಚೀನಾದ ತಂತ್ಞಜ್ಞಾನ ಕಂಪೆನಿಗಳಿಗೆ ಅಮೆರಿಕನಿಷೇಧ ಹೇರಿದ್ದಕ್ಕೆ ಪ್ರತಿಕ್ರಿಯೆಯಾಗಿದೆ ಎಂದಿದ್ದಾರೆ.‘ಕೆಲವು ಹೈಟೆಕ್ ಪೇಟೆಂಟ್‌ಗಳಿಗೆ ಹೊಸದಾಗಿ ಚೀನಾ ನಿರ್ಬಂಧ ಹೇರಿರುವುದು, ಇತರ ದೇಶಗಳ ಆರ್ಥಿಕತೆ ಮೇಲೆ ಪರಿಣಾಮ ಉಂಟುಮಾಡಲಿದೆ’ ಎಂದು ಅವರು ತಿಳಿಸಿದ್ದಾರೆ.

ಚೀನಾದ ಸಚಿವಾಲಯವು, ‘ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ತ್ವರಿತ ಅಭಿವೃದ್ಧಿಯೊಂದಿಗೆ ಚೀನಾದ ವೈಜ್ಞಾನಿಕ, ತಾಂತ್ರಿಕ ಶಕ್ತಿ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಯುನಿರಂತರ ಸುಧಾರಣೆಯಾಗಿದೆ. ಅಂತರರಾಷ್ಟ್ರೀಯ ಬೆಳವಣಿಗೆಗಳಿಗೆ ಅನುಗುಣವಾಗಿ ನಿಷೇಧ ಪಟ್ಟಿಯನ್ನು ಹೊಂದಿಸುವುದು ಅತ್ಯಗತ್ಯ’ ಎಂದು ಹೇಳಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.