ಬೀಜಿಂಗ್: ಚೀನಾ ತನ್ನ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಮಂಗಳವಾರ ಮೂವರು ಗಗನಯಾತ್ರಿಗಳನ್ನು ಕಳುಹಿಸಿದೆ.

ಈ ದಶಕದ ಅಂತ್ಯದ ವೇಳೆಗೆ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಯೋಜನೆ ಹೊಂದಿರುವ ಚೀನಾ, ಇದೇ ಮೊದಲ ಬಾರಿಗೆ ಕಕ್ಷೆಗೆ ಗಗನಯಾತ್ರಿಗಳನ್ನು ಕಳುಹಿಸಿದೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿರುವ ಚೀನಾ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮತ್ತು ರಷ್ಯಾದ ಹಂತಕ್ಕೆ ಬೆಳೆಯುವ ಉತ್ಸುಕತೆ ಪ್ರದರ್ಶಿಸಿದ್ದು, ಈ ಪ್ರಯತ್ನದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿದೆ.

ಮೂವರು ಗಗನಯಾತ್ರಿಗಳಿದ್ದ ‘ಶೆಂಝೌ-16’ ಗಗನನೌಕೆಯನ್ನು ಹೊತ್ತ ‘ಲಾಂಗ್ ಮಾರ್ಚ್ 2ಎಫ್’ ಹೆಸರಿನ ರಾಕೆಟ್ ಬೆಳಿಗ್ಗೆ 9.31ರಲ್ಲಿ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ನಭಕ್ಕೆ ಹಾರಿತು.

‘ಉಡಾವಣೆಯು ಯಶಸ್ವಿಯಾಗಿದೆ ಮತ್ತು ಗಗನಯಾತ್ರಿಗಳು ಉತ್ತಮ ಸ್ಥಿತಿಯಲ್ಲಿದ್ದಾರೆ’ ಎಂದು ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದ ನಿರ್ದೇಶಕ ಝೌ ಲಿಪೆಂಗ್ ಹೇಳಿದ್ದಾರೆ.

ಕಮಾಂಡರ್ ಜಿಂಗ್ ಹೈಪೆಂಗ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಎಂಜಿನಿಯರ್ ಝು ಯಾಂಗ್ಝು ಮತ್ತು ಬೈಹಾಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುಯಿ ಹೈಚಾವೊ ಇರಲಿದ್ದಾರೆ.

ಮಾನವರನ್ನು ಕಕ್ಷೆಗೆ ಕಳುಹಿಸಿದ ಮೂರನೇ ರಾಷ್ಟ್ರ ಚೀನಾ. ಚೀನಾ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ಮೂಲಕವೇ ಮಂಗಳ ಮತ್ತು ಚಂದ್ರನ ಮೇಲೆ ರೋಬೋಟಿಕ್ ರೋವರ್‌ಗಳನ್ನು ಇಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.