ಬೀಜಿಂಗ್: ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ನಿಟ್ಟಿನಲ್ಲಿ ಚೀನಾ ಗುರುವಾರದಿಂದ ಅಂತರ್ಜಾಲ ವೇದಿಕೆಯಲ್ಲಿನ ಎಲ್ಲ ಕಮೆಂಟ್ಗಳನ್ನುನಿಯಂತ್ರಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಚೀನಾ, ಅಂತರ್ಜಾಲ ವಿಷಯದಲ್ಲಿ ಮಾತ್ರ ಸಂಪೂರ್ಣ ನಿಯಂತ್ರಣ ಹೊಂದಿದೆ. ಬಹುತೇಕ ವಿದೇಶಿ ವೆಬ್ಸೈಟ್ ಹಾಗೂ ಆ್ಯಪ್ಗಳನ್ನು ಬ್ಲಾಕ್ ಮಾಡಿದೆ.

ಸಾಮಾಜಿಕ ಜಾಲತಾಣ ನಿಯಂತ್ರಣ ಘಟಕ ರಾಜಕೀಯವಾಗಿ ಸೂಕ್ಷ್ಮ ವಿಷಯಗಳನ್ನು ಅಳಿಸುವ ಜವಾಬ್ದಾರಿ ಹೊಂದಿವೆ. ಆದಾಗ್ಯೂ, ಸರ್ಕಾರವನ್ನು ಟೀಕಿಸುವ ಅನೇಕ ಪ್ರತಿಕ್ರಿಯೆಗಳು, ಅವಮಾನಗಳು, ವದಂತಿಗಳು ಮತ್ತು ಮಾನಹಾನಿಕರ ಸಂದೇಶಗಳು ಅಂತರ್ಜಾಲದಲ್ಲಿಯೇ ಉಳಿಯಲಿವೆ.

ನಕಲಿ ಬಳಕೆದಾರರು, ಟೀಕೆಗಳನ್ನು ಹತ್ತಿಕ್ಕಲು ಮುಂದಾಗಿರುವ ಚೀನಾ ಅಂತರ್ಜಾಲ ನಿಯಂತ್ರಣ ಘಟಕ, ಆನ್ಲೈನ್ ಪ್ರತಿಕ್ರಿಯೆ ನೀತಿಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಪ್ರತಿ ಬಳಕೆದಾರರು ನೈಜ ಹೆಸರು ಮತ್ತು ಗುರುತಿನ ಚೀಟಿಯೊಂದಿಗೆ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬೇಕು.

ಆನ್ಲೈನ್ ಕಾನೂನಿನಿಂದ ಹೊರತಾದ ವಿಭಾಗವಲ್ಲ ಎಂದಿರುವ ಚೀನಾ, ಸೇವಾ ಪ್ರವರ್ತಕರು ಬಳಕೆದಾರರ ಮೌಲ್ಯ ಮಾಪನ ನಡೆಸಬೇಕು ಎಂದಿದೆ. ಹೊಸ ನಿಯಮಗಳು ವಿಶೇಷವಾಗಿ ವೆಬ್ ಹಾಗೂ ಆ್ಯಪ್ನ ಪ್ರತಿಕ್ರಿಯೆ ವಿಭಾಗಕ್ಕೆ ಅನ್ವಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.