ವಾಷಿಂಗ್ಟನ್: ಕೋವಿಡ್-19 ಎರಡನೇ ಅಲೆ ಭಾರತಕ್ಕೆ ಸುನಾಮಿಯಂತೆ ಅಪ್ಪಳಿಸಿದ್ದು, ಸೋಂಕು ಹೆಚ್ಚಳಕ್ಕೆ ದೇಶದಾದ್ಯಂತ ನಡೆದ ಚುನಾವಣಾ ಸಂಬಂಧಿ ರ್ಯಾಲಿ, ಸಭೆ, ಸಮಾವೇಶಗಳು ಹಾಗೂ ಧಾರ್ಮಿಕಕಾರ್ಯಕ್ರಮಗಳು ಕಾರಣಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಒನ್ ಶೇರ್ ವರ್ಲ್ಡ್ ಆಯೋಜಿಸಿದ್ದ ಗ್ಲೋಬಲ್ ವಾಕ್ಸಿನ್ ಈಕ್ವಿಟಿ ಕುರಿತು ವರ್ಚುವಲ್ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕು ನಮ್ಮ ದೇಶದ ಯಾವ ಭಾಗವನ್ನೂ ಬಿಟ್ಟಿಲ್ಲ. ಈ ಎರಡನೇ ಅಲೆಯ ಸೋಂಕು ನಗರದ ಜತೆಗೆ ಗ್ರಾಮೀಣ ಪ್ರದೇಶಗಳಿಗೂ ಹರಡಿದೆ‘ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವುದರಿಂದ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಆಸ್ಪತ್ರೆಯಂತಹ ವೈದ್ಯಕೀಯ ಸೌಲಭ್ಯಗಳಿಗೆ ಬೇಡಿಕೆಯೂ ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆಯಾಗಿದೆ. ಏರಿಕೆಯಾಗುತ್ತಿರುವ ರೋಗಿಗಳ ನಿರ್ವಹಣೆಗೆ ಬೇಕಾದ ಮಾನವ ಸಂಪನ್ಮೂಲವಿಲ್ಲ. ಚಿಕಿತ್ಸೆ ನೀಡಲು ಸಾಕಷ್ಟು ಔಷಧಗಳಿಲ್ಲ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡಲು ಅಗತ್ಯ ವೈದ್ಯಕೀಯ ಪರಿಕರಗಳ ಪೂರೈಕೆಯಾಗುತ್ತಿಲ್ಲ'ಎಂದು ಮಜುಂದಾರ್ ಶಾ ಹೇಳಿದರು.

‘ಇಂಥ ಹಲವು ಸಮಸ್ಯೆಗಳ ಜತೆಗೆ, ನಮಗೆ ಲಸಿಕೆ ಕೊರತೆಯೂ ಕಾಡುತ್ತಿದೆ. ದೇಶದಲ್ಲಿ ಹೆಚ್ಚಿರುವ ಜನಸಂಖ್ಯೆ ಇಷ್ಟೆಲ್ಲ ಸವಾಲುಗಳನ್ನು ತಂದೊಡ್ಡುತ್ತಿದೆ. ಇಂಥ ಸಂದರ್ಭದಲ್ಲಿ ಜಾಗತಿಕ ಸಮುದಾಯಗಳು ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಿರುವುದು ಸ್ವಾಗತಾರ್ಹ' ಎಂದು ಅವರು ಹೇಳಿದ್ದಾರೆ.

‘ಭಾರತ ಸುರಕ್ಷಿತವಾಗಿಲ್ಲದಿದ್ದರೆ, ಜಗತ್ತು ಸುರಕ್ಷಿತವಲ್ಲ ಎಂದು ನಾನು ನಿಮಗೆ ಹೇಳಬಲ್ಲೆ'ಎಂದು ಮಜುಂದಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.