ಜಿನೀವಾ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಜತೆ ಒಗ್ಗಟ್ಟು ಪ್ರದರ್ಶಿಸಿರುವ ಸ್ವಿಟ್ಜರ್ಲೆಂಡ್, ಸ್ವಿಸ್‌ನ ಆಲ್ಪ್ಸ್ ಪರ್ವತ ಶ್ರೇಣಿಯ ಮ್ಯಾಟರ್‌ಹಾರ್ನ್ ಶಿಖರದ ಮೇಲೆ ವಿದ್ಯುತ್ ದೀಪದಲ್ಲಿ ತ್ರಿವರ್ಣ ಧ್ವಜ ಬೆಳಗಿಸಿತು.

ವಿಶ್ವದ ಹಲವು ದೇಶಗಳ ಧ್ವಜಗಳನ್ನೂ ಪರ್ವತದ ಮೇಲೆ ಮೂಡಿಸಲಾಗಿದ್ದು, ಸ್ವಿಜರ್ಲೆಂಡ್‌ನ ಈ ಕಾರ್ಯಕ್ಕೆ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವಿಸ್‌ನ ವಿದ್ಯುತ್ ದೀಪ ಕಲಾವಿದ ಗೆರ್ರಿ ಹಾಫ್‌ಸ್ಟೆಟರ್ ಸ್ವಿಟ್ಜರ್ಲೆಂಡ್ ಮತ್ತು ಇಟಲಿ ನಡುವಿನ 4,478 ಮೀಟರ್ ಎತ್ತರದ ಪಿರಮಿಡ್ ಆಕಾರದ ಶಿಖರದ ಮೇಲೆ ವಿವಿಧ ದೇಶಗಳ ಧ್ವಜಗಳನ್ನು ವಿದ್ಯುತ್ ದೀಪಗಳಿಂದ ಮೂಡಿಸುವ ಮೂಲಕ ಭರವಸೆಯ ಸಂದೇಶ ಸಾರಿದರು. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ದೇಶಗಳಿಗೆ ಈ ಮೂಲಕ ಬೆಂಬಲ ಸೂಚಿಸಲಾಯಿತು.

"ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದೆ. ಇಷ್ಟು ದೊಡ್ಡ ದೇಶದಲ್ಲಿನ ಸವಾಲುಗಳು ದೊಡ್ಡವೇ. ಮ್ಯಾಟರ್‌ಹಾರ್ನ್‌ನಲ್ಲಿ ಮೂಡಿಸಲಾಗಿರುವ ಭಾರತೀಯ ಧ್ವಜವು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮತ್ತು ಎಲ್ಲಾ ಭಾರತೀಯರಿಗೆ ಭರವಸೆ ಮತ್ತು ಶಕ್ತಿ ತುಂಬುವ ಸದುದೇಶದಿಂದ ಕೂಡಿದೆ,’ ಎಂದು ಪ್ರವಾಸೋದ್ಯಮ ಸಂಸ್ಥೆ ‘ಜೆರ್ಮಟ್ ಮ್ಯಾಟರ್ಹಾರ್ನ್’ ತನ್ನ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದೆ.

"ಕೋವಿಡ್ ವಿರುದ್ಧ ಜಗತ್ತು ಒಟ್ಟಾಗಿ ಹೋರಾಡುತ್ತಿದೆ. ಮಾನವೀಯತೆಯು ಈ ಸಾಂಕ್ರಾಮಿಕ ರೋಗವನ್ನು ಖಂಡಿತ ಸೋಲಿಸುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಶಿಖರದ ಮೇಲಿನ ತ್ರಿವ್ರಣ ದ್ವಜದ ಚಿತ್ರವನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ನರೇಂದ್ರ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.