ಬೋಧಗಯಾ, ಬಿಹಾರ (ಪಿಟಿಐ): ಬೌದ್ಧ ಧರ್ಮ ಮತ್ತು ಅದರ ಅನುಯಾಯಿಗಳ ಮೇಲೆ ಹಲವು ವರ್ಷ ನಿಗ್ರಹ ಮತ್ತು ದಬ್ಬಾಳಿಕೆ ನಡೆದ ನಂತರವು ಚೀನಾದಲ್ಲಿ ಬೌದ್ಧ ಧರ್ಮ ಕುರಿತ ಆಸಕ್ತಿ ಹೆಚ್ಚುತ್ತಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಹೇಳಿದರು.

ಬೋಧಗಯಾದಲ್ಲಿ ನಡೆದ ಬೌದ್ಧರ ಸಾಂಪ್ರದಾಯಿಕ ಪ್ರಾರ್ಥನೆ ಸಂದರ್ಭದಲ್ಲಿ ಬೌದ್ಧ ಧರ್ಮೀಯರು, ಬೆಂಬಲಿಗರನ್ನು ಉದ್ದೇಶಿಸಿ 87 ವರ್ಷ ವಯಸ್ಸಿನ ದಲೈಲಾಮಾ ಅವರು ಮಾತನಾಡಿದರು.

ಟಿಬೆಟ್‌ನಲ್ಲಿ ಬೌದ್ಧ ಸಂಪ್ರದಾಯ ಈಶಾನ್ಯದ ಜನರ ಗಮನಸೆಳೆಯುತ್ತಿದೆ. ಇಂದು ಸಿದ್ಧಾಂತ ಮತ್ತು ಚಿಂತನೆಗಳು ಜಗತ್ತಿನೆಲ್ಲೆಡೆ ಹರಡಿವೆ. ಹಲವು ವಿಜ್ಞಾನಿಗಳೂ ಆಸಕ್ತಿ ತೋರುತ್ತಿದ್ದಾರೆ ಎಂದು ತಿಳಿಸಿದರು.

ಭೌದ್ಧಧರ್ಮ ಇದು ಟಿಬೆಟ್‌ನಲ್ಲಿಯಷ್ಟೇ ಅಲ್ಲ, ಚೀನಾದಲ್ಲಿಯೂ ಗಮನಸೆಳೆಯುತ್ತಿದೆ ಎಂದರು. ಮಾವೊ ಜೆಡೊಂಗ್ ಅವರ ಕಮ್ಯುನಿಸ್ಟ್ ಕ್ರಾಂತಿಯ ನಂತರ ದಲೈಲಾಮಾ ಅವರು 1959ರಲ್ಲಿ ಚೀನಾದಿಂದ ಪಲಾಯನ ಮಾಡಿದ್ದರು.

ಪ್ರಸ್ತುತ ಚೀನಾ ಮತ್ತು ಜಗತ್ತಿನ ವಿವಿಧೆಡೆ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಉತ್ತಮ ಜಗತ್ತು ನಿರ್ಮಾಣ ಕುರಿತಂತೆ ನಾನು ಎಂದಿಗೂ ಆಶಾವಾದಿಯಾಗಿದ್ದೇನೆ ಎಂದು ದಲೈಲಾಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.