ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ದುರ್ಗಾ ಪೂಜೆ ಆಯೋಜನೆಗೊಂಡಿದ್ದು, ಭಾರತೀಯರು ಹಾಗೂ ಅಮೆರಿಕನ್ನರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ಬಂಗಾಳಿ ಕ್ಲಬ್ ಆಯೋಜಿಸಿರುವ ದುರ್ಗಾಪೂಜೆ ಸಂಭ್ರಮದ ಚಿತ್ರ ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಟೈಮ್ಸ್ ಸ್ಕ್ವೇರ್ನಲ್ಲಿ ದುರ್ಗಾ ಪೂಜಾ ಪೆಂಡಾಲ್ ಸ್ಥಾಪಿಸಲಾಗಿದ್ದು, ದುರ್ಗೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನವಮಿ ಪೂಜೆ, ದುರ್ಗಾ ಸ್ತೋತ್ರ ಪಾರಾಯಣಗಳು ನಡೆಯುತ್ತಿವೆ. ಇದರೊಂದಿಗೆ ಲೈವ್ ಬ್ಯಾಂಡ್ಗೆ ಭಾರತೀಯರು ನರ್ತಿಸಿ ಸಂಭ್ರಮಿಸುವ ವಿಡಿಯೊಗಳು ಹರಿದಾಡುತ್ತಿವೆ.

‘ಇದು ಐತಿಹಾಸಿ ಗಳಿಗೆ’ ಎಂದು ಬಣ್ಣಿಸಿರುವ ಹಲವರು, ‘ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ವೈವಿಧ್ಯತೆ ಬಿಂಬಿಸುವ ಇದು ಭಾರತೀಯರ ಶಕ್ತಿ’ ಎಂದಿದ್ದಾರೆ.

‘ಅಮೆರಿಕದ ಟೈಮ್ಸ್ ಸ್ಕ್ವೇರ್ನಲ್ಲಿ ದುರ್ಗಾ ಪೂಜೆ ನೆರವೇರಲಿದೆ ಎಂದು ಯಾರಾದರೂ ಊಹಿಸಿದ್ದಿರಾ? ಬಂಗಾಳಿಗಳಿಗೆ ಇದು ಹೆಮ್ಮೆಯ ವಿಷಯವಾಗಿದೆ. ಆಧುನಿಕತೆ ಹಾಗೂ ಸಂಪ್ರದಾಯ ಸಮ್ಮಿಳತವಾದ ಸುಂದರ ಕ್ಷಣವಿದು. ಮನೆಯಿಂದ ಸಾವಿರಾರು ಮೈಲಿ ದೂರದಲ್ಲಿರುವ ನಮಗೆ, ಅಲ್ಲಿನ ಸಡಗರದ ನೆನಪು ತಂದಿದೆ. ನಮ್ಮ ಮೂಲ, ಸಂಸ್ಕೃತಿ ಹಾಗೂ ತಾಯಿ ದುರ್ಗೆಯ ಆಶೀರ್ವಾದ ಗಡಿಯಾಚೆಗೂ ಲಭ್ಯವಾಗಿದೆ. ಮುಂದಿನ ಪೀಳಿಗೆಯೂ ಇದನ್ನು ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಟೈಮ್ಸ್ ಸ್ಕ್ವೇರ್ನ ದುರ್ಗಾಪೂಜೆಯ ಸಡಗರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.