ಜಿನೀವಾ: ಸ್ವಿಟ್ಜರ್ಲ್ಯಾಂಡ್ನ ವಿದೇಶಾಂಗ ಸಚಿವ ಇನಾಜಿಯೊ ಡ್ಯಾನಿಲೆ ಜಿಯೊವಾನಿ ಜೊತೆಗೆ, ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ವಾಣಿಜ್ಯ ವಹಿವಾಟು ಒಳಗೊಂಡು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಇಲ್ಲಿ ಚರ್ಚಿಸಿದರು.

ಭಾರತ ಮತ್ತು ನಾಲ್ಕು ಐರೋಪ್ಯ ದೇಶಗಳ ಒಕ್ಕೂಟವಾದ ಇಎಫ್ಟಿಎ ಜೊತೆಗಿನ ವಾಣಿಜ್ಯ ಒಪ್ಪಂದವನ್ನು ಕೇಂದ್ರವಾಗಿಸಿಕೊಂಡು ಈ ಮಾತುಕತೆ ನಡೆಯಿತು. ಈ ಒಕ್ಕೂಟದಲ್ಲಿ ಸ್ವಿಟ್ಜರ್ಲ್ಯಾಂಡ್ ಹೊರತುಪಡಿಸಿ ಐಲ್ಯಾಂಡ್, ಲೀಚ್ಟೆನ್ಸ್ಟೀನ್, ನಾರ್ವೆ ರಾಷ್ಟ್ರಗಳಿವೆ.

ಐರೋಪ್ಯ ಮುಕ್ತ ವಾಣಿಜ್ಯ ಒಕ್ಕೂಟ (ಇಎಫ್ಟಿಎ) ಜೊತೆಗೆ ಭಾರ ಕಳೆದ ಮಾರ್ಚ್ ತಿಂಗಳಲ್ಲಿ ವಾಣಿಜ್ಯ ಮತ್ತು ಆರ್ಥಿಕ ಪಾಲುದಾರಿಕೆ ಕುರಿತು ಒಪ್ಪಂದಕ್ಕೆ ಸಹಿ ಹಾಕಿತ್ತು. ಒಕ್ಕೂಟದ ನಾಲ್ಕು ರಾಷ್ಟ್ರಗಳಿಂದ ಸುಮಾರು 100 ಬಿಲಿಯನ್ ಡಾಲರ್ ಹೂಡಿಕೆಯಾಗಿತ್ತು.

ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದೆ. ವಿವಿಧ ಕ್ಷೇತ್ರಗಳನ್ನು ಒಳಗೊಂಡು ಉಭಯ ನಾಯಕರು ವಿಸ್ತೃತ ಚರ್ಚೆ ನಡೆಸಿದರು ಎಂದು ತಿಳಿಸಿದೆ.

ಪ್ರವಾಸದ ಅವಧಿಯಲ್ಲಿ ಜೈಶಂಕರ್ ಅವರು ವಿಶ್ವಸಂಸ್ಥೆಯ ಹೈಕಮಿಷನರ್, ವಿಶ್ವ ಆರೋಗ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೇರಿ ಹಲವು ಪ್ರಮುಖರ ಜೊತೆಗೂ ಚರ್ಚಿಸಿದರು.

ಇದೇ ವೇಳೆ ಅವರು ಜಿನೀವಾದ ಪರ್ಮನೆಂಟ್ ಮಿಷನ್ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.