ಬೆಲ್ಗ್ರೇಡ್, ಸರ್ಬಿಯಾ: ಮೊನ್ನೆಯಷ್ಟೇ ಸರ್ಬಿಯಾದ ಶಾಲೆಯೊಂದಲ್ಲಿ ನಡೆದ ಭೀಕರ ಗುಂಡಿನ ದಾಳಿ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಭೀಕರ ಗುಂಡಿನ ದಾಳಿ ಆ ದೇಶದಲ್ಲಿ ನಡೆದಿದೆ.

ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್ನಿಂದ 60 ಕಿಮೀ ದೂರ ಇರುವ ಮಾಲೊ ಪ್ರಾಂತ್ಯದ Mladenovac ಎಂಬ ಪಟ್ಟಣದ ಬಳಿ ಆಗಂತುಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದರಿಂದ 8 ಜನ ಮೃತಪಟ್ಟು 13 ಜನ ಗಂಭೀರವಾಗಿ ಗಾಯಗೊಂಡಿರು ಘಟನೆ ಗುರುವಾರ ಸಂಜೆ ನಡೆದಿದೆ.

ಸ್ವಯಂಚಾಲಿತ ಗನ್ನೊಂದಿಗೆ ರಸ್ತೆಗೆ ಇಳಿದಿದ್ದ ದಾಳಿಕೋರ ಚಲಿಸುವ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಸ್ಥಳದಲ್ಲೇ 8 ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆರ್ಟಿಎಸ್ ವಾಹಿನಿ ಆಧರಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಸ್ಥಳದಲ್ಲಿ ಹೆಲಿಕಾಪ್ಟರ್ನೊಂದಿಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಬೀಡು ಬಿಟ್ಟಿದ್ದು, ದಾಳಿ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪ್ರಯತ್ನ ಪಡುತ್ತಿದ್ದಾರೆ.

ಮಂಗಳವಾರ ಬೆಲ್ಗ್ರೇಡ್ನ ಶಾಲೆಯೊಂದರಲ್ಲಿ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದ. 8 ಮಕ್ಕಳು ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಒಬ್ಬ ಶಿಕ್ಷಕ ಮತ್ತು 6 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ದಾಳಿ ನಡೆಸಿದ ಯುವಕನನ್ನು ಬಂಧಿಸಲಾಗಿದೆ.

2013 ರಲ್ಲಿ Mladenovac ಬಳಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಮೇಲೆ ಗುಂಡಿನ ದಾಳಿ ಮಾಡಿ 13 ಜನರನ್ನು ಕೊಂದಿದ್ದ. ಈ ಘಟನೆಯೇ ಸರ್ಬಿಯಾದಲ್ಲಿ ಇತ್ತೀಚೆಗಿನ ದೊಡ್ಡ ದಾಳಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.