ಮಿನಿಯಾಪೋಲಿಸ್ : ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನ ಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಮಿನಿಯಾಪೋಲಿಸ್ನ ಮಾಜಿ ಪೊಲೀಸ್ ಅಧಿಕಾರಿ ಟೌ ಥಾವೊ ಕೂಡ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.

ಎರಡೂ ಕಡೆಯವರ ವಾದ– ಪ್ರತಿವಾದ, ಲಿಖಿತ ಸಾಕ್ಷ್ಯಗಳನ್ನು ಪರಿಶೀಲಿಸಿದ ಹೆನ್ನೆಪಿನ್ ಕೌಂಟಿ ನ್ಯಾಯಾಧೀಶ ಪೀಟರ್ ಕ್ಯಾಹಿಲ್ ಅವರು ಸೋಮವಾರ ಈ ತೀರ್ಪು ನೀಡಿದ್ದು, ಮಂಗಳವಾರ ಆದೇಶ ಹೊರಬಿದ್ದಿದೆ. ಥಾವೊ ಸುಮಾರು ಒಂಬತ್ತು ವರ್ಷಗಳ ಸೇವಾ ಅನುಭವದ ಹೊರತಾಗಿಯೂ ಕೃತ್ಯ ನಡೆಯುವಾಗ ಧೈರ್ಯ ಮತ್ತು ಕರುಣೆ ತೋರಿಸಲಿಲ್ಲವೆಂದು ಪ್ರಾಸಿಕ್ಯೂಟರ್ಗಳು ತಮ್ಮ ವಾದ ಮಂಡಿಸಿದ್ದರು.

ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಫ್ಲಾಯ್ಡ್ನ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೌ ಥಾವೊ ಅಪರಾಧಿ ಎಂದು ಈಗಾಗಲೇ ಫೆಡರಲ್ ಕೋರ್ಟ್ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಮಾಜಿ ಅಧಿಕಾರಿಗಳ ಪೈಕಿ ಟೌ ಥಾವೊ ಕೊನೆಯವನು.

2020ರ ಮೇ 25ರಂದು ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಎಂಬಾತ ಜಾರ್ಜ್ಫ್ಲಾಯ್ಡ್ನ ಕುತ್ತಿಗೆಯನ್ನು ಮಂಡಿಯಿಂದ ನೆಲಕ್ಕೆ ಒಂಬತ್ತೂವರೆ ನಿಮಿಷಗಳ ಕಾಲ ಒತ್ತಿಹಿಡಿದು ಹತ್ಯೆ ಮಾಡುವಾಗ, ಫ್ಲಾಯ್ಡ್ ರಕ್ಷಿಸಲು ಮುಂದಾದವರನ್ನು ತಡೆದ ಆರೋಪ ಟೌ ಥಾವೊ ಮೇಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.