ಸಿಯೋಲ್: ದೂರಗಾಮಿ ಖಂಡಾಂತರ ಕ್ಷಿಪಣಿಯ ಮತ್ತೊಂದು ಪರೀಕ್ಷೆ ನಡೆಸಿದ್ದಾಗಿ ಉತ್ತರ ಕೊರಿಯಾ ಗುರುವಾರ ಹೇಳಿದೆ. ಈ ಕ್ಷಿಪಣಿ ಇದುವರೆಗೆ ನಡೆಸಿದ ಪರೀಕ್ಷೆಗಿಂತ ಹೆಚ್ಚಿನ ದೂರ ಕ್ರಮಿಸಿದೆ ಎಂದು ದೇಶದ ಸುದ್ದಿ ಸಂಸ್ಥೆ KCNA ವರದಿ ಮಾಡಿದೆ.
.ರಷ್ಯಾ ಯುದ್ಧಕ್ಕೆ ಉತ್ತರ ಕೊರಿಯಾ ಸೇನಾ ಪಡೆಗಳ ರವಾನೆ: ನ್ಯಾಟೊ.
ನಮ್ಮ ಶತ್ರುಗಳ ಅಪಾಯಕಾರಿ ನಡೆಗಳು, ನಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಪರೀಕ್ಷಾ ಸ್ಥಳದಲ್ಲೇ ಅವರು ಹಾಜರಿದ್ದರು ಎಂದು ಸುದ್ದಿ ಸಂಸ್ಥೆ ಹೇಳಿದೆ.

‘ಅಣ್ವಸ್ತ್ರ ಸಾಮರ್ಥ್ಯವನ್ನು ಬಲಪಡಿಸುವ ತನ್ನ ನಿರ್ಧಾರದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ’ ಎಂದು ಶಪಥಗೈದಿದ್ದಾರೆ.
.ಯುಎಸ್ ಪರಮಾಣು ಸಾಮರ್ಥ್ಯ ವೃದ್ಧಿಯಿಂದ ಬೆದರಿಕೆ: ಉತ್ತರ ಕೊರಿಯಾ ನಾಯಕ ಕಿಮ್.
‘ಈ ಪರೀಕ್ಷೆಯು ಮಿಲಿಟರಿ ಕ್ರಮವಾಗಿದ್ದು, ನಮ್ಮ ಪ್ರತಿಸ್ಪರ್ಧಿಗಳಿಗೆ ತಿಳಿಸುವ ಉದ್ದೇಶವನ್ನು ಪೂರೈಸಿದೆ’ಎಂದು ಹೇಳಿದ್ದಾರೆ.

ದೇಶದ ಪರಮಾಣು ನಿರೋಧಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಖಂಡಾಂತರ ಕ್ಷಿಪಣಿಯ ‘ಅತ್ಯಂತ ನಿರ್ಣಾಯಕ’ ಪರೀಕ್ಷೆಯಲ್ಲಿ ನಾಯಕ ಕಿಮ್ ಜಾಂಗ್ ಉನ್ ಭಾಗವಹಿಸಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿದೆ.
.ಉತ್ತರ ಕೊರಿಯಾ ಮಧ್ಯಪ್ರವೇಶಿಸಿದರೆ ವಿಶ್ವ ಯುದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.
ಉತ್ತರ ಕೊರಿಯಾದ ಈ ನಡೆಯನ್ನು ಅಮೆರಿಕ ಖಂಡಿಸಿದ್ದು, ‘ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನಿರ್ಣಯಗಳ ಸ್ಪಷ್ಟ ಉಲ್ಲಂಘನೆ’ ಎಂದು ಹೇಳಿದೆ. ಅಲ್ಲದೆ ಇದು ಭದ್ರತೆಯನ್ನು ಅಸ್ಥಿರಗೊಳಿಸುವ ಅಪಾಯವನ್ನುಂಟು ಮಾಡಿದೆ’ ಎಂದಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಅಧರಿಸಿ ಬರೆದ ಸುದ್ದಿ)
.ದಾಳಿಗೆ ಪ್ರಚೋದಿಸಿದರೆ ದಕ್ಷಿಣ ಕೊರಿಯಾ ಸರ್ವನಾಶ: ಕಿಮ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.