ಕರಾಚಿ, ಪಾಕಿಸ್ತಾನ: ‘ಇಲ್ಲಿನ ಬೆಡ್‌ಶೀಟ್ ತಯಾರಿಕೆಯ ಜವಳಿ ಕಾರ್ಖಾನೆಯಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು, ಅದನ್ನು ನಂದಿಸುವ ವೇಳೆ ಅಗ್ನಿಶಾಮಕದಳದ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನ್ಯೂ ಕರಾಚಿ ಪ್ರದೇಶದಲ್ಲಿರುವ ಈ ಕಾರ್ಖಾನೆಯಲ್ಲಿ ಗುರುವಾರ ಬೆಳಿಗ್ಗೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಎಂಟು ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ತಹಾ ಸಲೀಂ ಹೇಳಿದರು.

‘ಆರು ಮಹಡಿಯ ಈ ಕಟ್ಟಡದಲ್ಲಿ ಬಟ್ಟೆಗಳಿಂದಾಗಿ ಹಾಗೂ ಇತರ ರಾಸಾಯನಿಕಗಳಿಂದಾಗಿ ನಾಲ್ಕು ಮಹಡಿಗಳವರೆಗೂ ಬೆಂಕಿ ವ್ಯಾಪಿಸಿದೆ. ಅಲ್ಲದೇ ಪಕ್ಕದಲ್ಲಿರುವ ಮೋಟಾರ್‌ಸೈಕಲ್ ಬಿಡಿ ಭಾಗಗಳ ತಯಾರಿಕೆ ಕಾರ್ಖಾನೆಗೂ ಬೆಂಕಿ ಹರಡಿದೆ’ ಎಂದು ಅಗ್ನಿಶಾಮಕ ದಳದ ಹಿರಿಯ ಸಿಬ್ಬಂದಿ ಆದಿಲ್ ಖಾನ್‌ಜಾದಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.