ಪ್ಯಾರಿಸ್: ಫ್ರಾನ್ಸ್ ಪ್ರಧಾನ ಮಂತ್ರಿ ಗೇಬ್ರಿಯಲ್ ಅಟ್ಟಲ್ ಅವರ ರಾಜೀನಾಮೆಯನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಂಗೀಕರಿಸಿದ್ದಾರೆ.

ಆದರೆ ದೇಶದ ಸ್ಥಿರತೆಗಾಗಿ ತಾತ್ಕಾಲಿಕವಾಗಿ ಉಸ್ತುವಾರಿ ಸರ್ಕಾರದ ಹುದ್ದೆಯಲ್ಲಿ ಮುಂದುವರಿಯುವಂತೆ ಗೇಬ್ರಿಯಲ್ ಅವರಿಗೆ ಸೂಚಿಸಿದ್ದಾರೆ.

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ದೇಶದಲ್ಲಿ ಈ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.

ಪ್ರಧಾನಿ ಗೇಬ್ರಿಯಲ್ ಮತ್ತು ಇತರೆ ಸಚಿವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಮ್ಯಾಕ್ರನ್ ಅವರ ಕಚೇರಿ ತಿಳಿಸಿದೆ. ಆದರೆ ಹೂಸ ಸರ್ಕಾರ ನೇಮಕವಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದಾರೆ.

ತಾತ್ಕಾಲಿಕ ಸರ್ಕಾರವು ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವುದರತ್ತ ಗಮನ ಹರಿಸಲಿದೆ ಎಂದು ತಿಳಿಸಿದೆ.

ಈ ತಿಂಗಳು ಫ್ರಾನ್ಸ್ ಸಂಸತ್ತಿಗೆ ನಡೆದಿದ್ದ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಬಹುಮತ ದೊರಕಿರಲಿಲ್ಲ. ಇದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಎರಡನೇ ಮಹಾಯುದ್ಧದ ಬಳಿಕ ಫ್ರಾನ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸ್ಥಿತಿ ಎದುರಾಗಿತ್ತು.
.PHOTOS | Paris Olympics: ಐತಿಹಾಸಿಕ ಒಲಿಂಪಿಕ್ಸ್ ಆಯೋಜನೆಗೆ ಫ್ರಾನ್ಸ್ ಸಜ್ಜು.ನೌಕಾಪಡೆಗೆ 26 ರಫೇಲ್ ಜೆಟ್ಗಳ ಖರೀದಿ: ಫ್ರಾನ್ಸ್ ಜೊತೆ ಭಾರತದ ಮಾತುಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.