ಮಿನ್ನೆಪೊಲಿಸ್ (ಅಮೆರಿಕ): ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅವರ ನಿರಂತರ ವಿಚಾರಣೆಗಾಗಿ ಮಾಡಿದ ಖರ್ಚು ₹ 27 ಕೋಟಿ (3.7 ಮಿಲಿಯನ್ ಡಾಲರ್) ಮೀರಿದೆ ಎಂದು ಮಿನ್ನೆಸೊಟಾದ ಹೆನ್ನೆಪಿನ್ ಕೌಂಟಿಯ ಶರಿಫ್ (ಕಾನೂನು ಪಾಲನಾ ವಿಭಾಗ) ಕಚೇರಿ ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ತಿಳಿಸಲಾಗಿದೆ.

ಈ ವೆಚ್ಚದಲ್ಲಿ ನೌಕರರ ವೇತನ, ನ್ಯಾಯಾಲಯ ಭದ್ರತೆ, ಜಾರ್ಜ್ಫ್ಲಾಯ್ಡ್ ಅವರ ಸಂತ್ರಸ್ತ ಕುಟುಂಬದವರಿಗೆ ಒದಗಿರಿಸಿರುವ ಸೇವೆಗಳು ಮತ್ತು ಇತರೆ ಖರ್ಚುಗಳು ಸೇರಿವೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ನೌಕರರ ವೇತನ ಮತ್ತು ನ್ಯಾಯಾಲಯದ ಭಧ್ರತೆಗಾಗಿಯೇ ₹23 ಕೋಟಿಯಷ್ಟು (3.2 ಮಿಲಿಯನ್ ಡಾಲರ್) ಖರ್ಚಾಗಿದೆ ಎಂದು ತಿಳಿಸಲಾಗಿದೆ.

’ಸ್ಟಾರ್ ಟ್ರಿಬ್ಯೂನ್’ ವರದಿ ಮಾಡಿರುವಂತೆ, ’ಸಿಬ್ಬಂದಿ ವೇತನ ಹೊರತುಪಡಿಸಿ, ನ್ಯಾಯಾಲಯದ ಭದ್ರತೆಗಾಗಿ ಮುಳ್ಳು ತಂತಿ ಮತ್ತು ರೇಜರ್ ಬೇಲಿ, ಬ್ಯಾರಿಕೇಡ್ ಮತ್ತು ಬೋರ್ಡಿಂಗ್ನಂತಹ ವಸ್ತುಗಳಿಗಾಗಿ ₹5.7ಕೋಟಿ ( 7,73,412 ಡಾಲರ್) ಖರ್ಚು ಮಾಡಲಾಗಿದೆ.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ಗೆ ನ್ಯಾಯಾಲಯವು ಏಪ್ರಿಲ್ ತಿಂಗಳಲ್ಲಿ 22 ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು.

ಈ ವಿಚಾರಣೆಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಕಚೇರಿ ಮತ್ತು ರಾಜ್ಯ ನ್ಯಾಯಾಲಯಗಳಿಂದ ಖರ್ಚಾಗಿರುವ ವೆಚ್ಚ ತಕ್ಷಣಕ್ಕೆ ಲಭ್ಯವಾಗಿಲ್ಲ. ಅಟಾರ್ನಿ ಜನರಲ್ ಕೇತ್ ಎಲ್ಲಿಸನ್ ಕಚೇರಿ ಪ್ರಕಾರ, ಈ ಪ್ರಕರಣಕ್ಕೆ ಕೆಲವು ಹೊರ ದೇಶಗಳ ಪ್ರಾಸಿಕ್ಯೂಟರ್ಗಳು ಉಚಿತವಾಗಿ ನೆರವಾಗಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖವಾಗಿ ನೆರವಾಗಿದ್ದ ಹೆನ್ನೆಪಿನ್ ಕೌಂಟಿಯ ಅಟಾರ್ನಿ ಜನರಲ್ ಕಚೇರಿ ನೌಕರರ ವೇತನ, ಫ್ಲಾಯ್ಡ್ ಕುಟುಂಬಕ್ಕೆ ನೀಡಿದ ’ಆಹಾರ ಮತ್ತು ವಸತಿ’ ಸೇವೆಗಾಗಿ ₹3.5 ಕೋಟಿ (4,67,877 ಡಾಲರ್) ಖರ್ಚು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.