ಬರ್ಲಿನ್: ಮೂರು ಸಾವಿರ ವರ್ಷಗಳಿಗೂ ಹಳೆಯದಾದ, ಈಗಲೂ ಹೊಳೆಯುತ್ತಿರುವ ಕಂಚಿನ ಖಡ್ಗ ಜರ್ಮನಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ ವಾರ ದಕ್ಷಿಣ ಜರ್ಮನಿಯ ನೊರ್ಡ್ಲಿಂಗನ್ನಲ್ಲಿ ಉತ್ಖನನ ವೇಳೆ ಈ ಖಡ್ಗ ಪತ್ತೆಯಾಗಿದೆ. ಇದು ಕ್ರಿ.ಪೂ 14ನೇ ಶತಮಾನದ ಅಂತ್ಯದಲ್ಲಿ ತಯಾರಾಗಿದ್ದಿರಬಹುದು ಎಂದು ಬವಾರಿಯಾ ರಾಜ್ಯದ ಐತಿಹಾಸಿಕ ವಸ್ತುಗಳ ಸಂಗ್ರಹಾಲಯ ಕಚೇರಿ ತಿಳಿಸಿದೆ.

‘ಖಡ್ಗವು ಕಂಚಿನ ಅಷ್ಟಭುಜಾಕೃತಿಯ ಹಿಡಿಕೆ ಹೊಂದಿದೆ. ಒಬ್ಬ ವ್ಯಕ್ತಿ, ಮಹಿಳೆ ಮತ್ತು ಬಾಲಕನ ಸಮಾಧಿ ಅಡಿ ಇದು ಪತ್ತೆಯಾಗಿದೆ. ಈ ಮೂವರೂ ಸಂಬಂಧಿಗಳೇ ಎಂಬುದು ಸ್ಪಷ್ಟವಾಗಿಲ್ಲ. ಖಡ್ಗವನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.