ಬರ್ಲಿನ್: ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರು ನೋವಿಚೋಕ್ ಎಂಬ ವಿಷ ಪದಾರ್ಥ ಸೇವಿಸಿರುವುದನ್ನು ಫ್ರಾನ್ಸ್ ಮತ್ತು ಸ್ವೀಡನ್ ವಿಶೇಷ ಪ್ರಯೋಗಾಲಯಗಳು ದೃಢಪಡಿಸಿರುವುದಾಗಿ ಜರ್ಮನ್ ಸರ್ಕಾರ ಸೋಮವಾರ ತಿಳಿಸಿದೆ.

ಜರ್ಮನ್ ಮಿಲಿಟರಿ ಪ್ರಯೋಗಾಲಯವೂ ತಾವು ಪರೀಕ್ಷಿಸಿದ ಮಾದರಿಯಲ್ಲಿ ಇದೇ ವಸ್ತುವಿತ್ತು ಎಂಬುದನ್ನು ದೃಢಪಡಿಸಿತ್ತು.

‘ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆಯೂ ಮಾದರಿಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ‘ ಎಂದುಜರ್ಮನ್ ಸರ್ಕಾರದ ವಕ್ತಾರ ಸ್ಟೆಫೆನ್ ಸೈಬೆರ್ಟ್ ತಿಳಿಸಿದ್ದಾರೆ.

ನವಾಲ್ನಿ ಅವರು ಆಗಸ್ಟ್ 20ರಂದು ರಷ್ಯಾದಲ್ಲಿ ಸೈಬೀರಿಯಾದ ಟಾಮ್ಸ್ಕ್ನಿಂದ ಮಾಸ್ಕೋಗೆ ವಿಮಾನದಲ್ಲಿ ಹಿಂದಿರುಗುತ್ತಿದ್ದಾಗ ಅನಾರೋಗ್ಯಕ್ಕೆ ಒಳಗಾದರು. ಇದಾಗಿ ಎರಡು ದಿನಗಳ ನಂತರ ಅವರನ್ನು ಜರ್ಮನಿಗೆ ಕರೆತರಲಾಯಿತು. ರಷ್ಯಾ ಈ ಪ್ರಕರಣದ ತನಿಖೆ ನಡೆಸಬೇಕು‘ ಎಂದು ಸೈಬೆರ್ಟ್ ಒತ್ತಾಯಿಸಿದ್ದಾರೆ.

ಈ ಪ್ರಕರಣದ ತನಿಖೆಗೆ ಸಹಾಯ ಮಾಡಲು ರಷ್ಯಾದ ಮನವಿಗಳಿಗೆ ಸಹಕರಿಸುವುದಕ್ಕಾಗಿ ಜರ್ಮನಿ ತನ್ನ ನೆರಳನ್ನು ಎಳೆದಿದೆ ಎಂದು ಅದು ಆರೋಪಿಸಿದೆ, ಇದನ್ನು ಬರ್ಲಿನ್ ನಿರಾಕರಿಸಿದೆ.

ನವಾಲ್ನಿ ಅವರಿಗೆ ಆಂಟಿಡೋಟ್ ಚಿಕಿತ್ಸೆ (ನಂಜುನಿವಾರಕ ಚಿಕಿತ್ಸೆ) ನೀಡುತ್ತಿದ್ದ ಕಾರಣ, ಒಂದು ವಾರಕ್ಕೂ ಹೆಚ್ಚು ಕಾಲ ಕೃತಕವಾಗಿ ಕೋಮಾದಲ್ಲಿ ಇಡಲಾಗಿತ್ತು. ಒಂದು ವಾರದ ಹಿಂದೆ ಅವರ ಆರೋಗ್ಯ ಸ್ಥಿತಿ ತುಸು ಸುಧಾರಿಸಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲೆಕ್ಸಿ ನವಾಲ್ನಿ(44) ಅವರು ಆಗಸ್ಟ್ 20ರಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.