ನಮ್ಮೂರ ರಸ್ತೆ ಮೇಲೆ ಓಡಾಡುವ ಮಿಟ್ಸುಬಿಷಿ,ರೆನಾಲ್ಟ್, ನಿಸಾನ್ ಕಂಪನಿಗಳ ಕಾರು–ಲಾರಿಗಳನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳಿ. ಇಂಥ ದೈತ್ಯ ಬಹುರಾಷ್ಟ್ರೀಯ ವಾಹನ ತಯಾರಿಕಾ ಕಂಪನಿಗಳನ್ನು ಮುನ್ನಡೆಸಿದ ಕಾರ್ಲೊಸ್ ಘೌನ್ ಎಂಬಾತ ತನ್ನ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಿದ್ದ ಜಪಾನ್‌ನಿಂದಸಾವಿರಾರು ಕಿಲೊಮೀಟರ್ ದೂರದ ಲೆಬನಾನ್‌ಗೆಪಲಾಯನ ಮಾಡಿದ್ದಾನೆ.

ಹೊಸ ವರ್ಷದ ಮೊದಲ ದಿನ ಇದು ವಿಶ್ವದಾದ್ಯಂತ ಸಂಚಲನ ಮೂಡಿಸಿದ ಸುದ್ದಿ. ನೀವು ಈವರೆಗೆ ನೋಡಿರುವ ಯಾವುದಾದರೂ ಥ್ರಿಲ್ಲರ್ ಹಾಲಿವುಡ್ ಸಿನಿಮಾ ನೆನಪಿಸಿಕೊಳ್ಳಿ. ಅದು ಕಟ್ಟಿಕೊಡುವ ರೋಚಕತೆಗಿಂತ ಏನೇನೂ ಕಡಿಮೆಯಿಲ್ಲ ಪಲಾಯನದ ಈನೈಜಕಥೆ.

ವಿಶ್ವದ ಮುಂಚೂಣಿವಾಹನ ತಯಾರಿಕಾ ಸಂಸ್ಥೆ ನಿಸಾನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕಾರ್ಲೊಸ್ ಘೌನ್ ಮೇಲೆ ಜಪಾನ್ ಅಧಿಕಾರಿಗಳು ದಾಖಲೆಗಳನ್ನು ತಿದ್ದಿದ, ಹಣಕಾಸು ಅವ್ಯವಹಾರಗಳಲ್ಲಿ ಭಾಗಿಯಾದ ಆರೋಪ ಹೊರಿಸಿದ್ದರು. ಪತ್ನಿಯ ಜೊತೆಗೆ ಮಾತನಾಡಲೂ ತನ್ನ ಅನುಮತಿ ಪಡೆದುಕೊಳ್ಳಬೇಕು ಎಂದುಅಲ್ಲಿನ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು. ಲಕ್ಷಾಂತರ ಯೆನ್ (ಜಪಾನ್ ಕರೆನ್ಸಿ) ಖಾತ್ರಿ ನೀಡಿದ ಮೇಲೆ ಜಾಮೀನು ದೊರೆತಿತ್ತು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಸಾಕಷ್ಟು ನಿರ್ಬಂಧಗಳ ಜೊತೆಗೆದಿನದ 24 ತಾಸು ಕ್ಯಾಮೆರಾ ಕಣ್ಗಾವಲಿನಲ್ಲಿ ಇರಬೇಕಾದ ಪರಿಸ್ಥಿತಿ ಎದುರಿಸಬೇಕಿತ್ತು.

ಸ್ವಿಡ್ಜೆರ್‌ಲೆಂಡ್ ಮತ್ತು ದುಬೈನಿಂದ ಸಾಕಷ್ಟು ಮಾಹಿತಿ ಕಲೆಹಾಕಿದ್ದ ಜಪಾನ್‌ನ ತನಿಖಾಧಿಕಾರಿಗಳು ಅದನ್ನು ನ್ಯಾಯಾಲಯದ ಎದುರು ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.ನ್ಯಾಯಾಲಯದಲ್ಲಿ ಘೌನ್ ವಿರುದ್ಧದ ಆರೋಪಗಳು ಸಾಬೀತಾದರೆ, 15 ವರ್ಷದ ಸೆರೆವಾಸ ಬಹುತೇಕ ಖಾತ್ರಿಯಾಗಿತ್ತು. ಪರಿಸ್ಥಿತಿ ತನ್ನ ವಿರುದ್ಧವಾಗಿರುವುದನ್ನು ಮನಗಂಡ ಘೌನ್ ಶಿಕ್ಷೆ ತಪ್ಪಿಸಿಕೊಳ್ಳಲುಜಪಾನ್‌ನಿಂದ ಪರಾರಿಯಾದ ಎಂದು ‘ವಾಷಿಂಗ್‌ಟನ್ ಪೋಸ್ಟ್’ ವರದಿ ಮಾಡಿದೆ.

ಕಾರ್ಲೊಸ್ ಘೌನ್

ಹೇಗೆ ಹಾರಿದ?

ಜಾರ್ಜಿಯಾ ದೇಶದಿಂದ ಬಂದಿದ್ದ ಕ್ರಿಸ್‌ಮಸ್ ಬ್ಯಾಂಡ್ ತಂಡವೊಂದು ಘೌನ್ ನಿವಾಸದ ಸಮೀಪವೇ ಸಂಗೀತ ಕಾರ್ಯಕ್ರಮ ನೀಡಿತ್ತು. ಕಾರ್ಯಕ್ರಮದ ನಂತರ ವಾದ್ಯಗಳನ್ನು ಪೆಟ್ಟಿಗೆಗಳಲ್ಲಿ ಜೋಪಾನವಾಗಿ ಪ್ಯಾಕ್ ಮಾಡುತ್ತಿತ್ತು. ಈ ಸಂದರ್ಭ ಕ್ಯಾಮೆರಾ ಕಣ್ಗಾವಲು ಮತ್ತು ಭದ್ರತಾ ಅಧಿಕಾರಿಗಳನ್ನು ಯಾಮಾರಿಸಿದ 5.6 ಅಡಿ ಎತ್ತರಘೌನ್, ನಾಜೂಕಾಗಿ ವಾದ್ಯವೊಂದರ ಪೆಟ್ಟಿಗೆಯಲ್ಲಿ ಅಡಗಿದ.

ಸದ್ದಿಲ್ಲದೆ ಸಣ್ಣದೊಂದುವಿಮಾನ ನಿಲ್ದಾಣ ತಲುಪಿಕೊಂಡ ಘೌನ್, ಅಲ್ಲಿಂದ ಖಾಸಗಿ ವಿಮಾನದಲ್ಲಿ ಸೀದಾ ಟರ್ಕಿಯ ರಾಜಧಾನಿಇಸ್ತಾಂಬುಲ್‌ಗೆ ಹಾರಿದ. ಅಲ್ಲಿಂದ ಲೆಬನಾನ್ ರಾಜಧಾನಿ ಬೈರೂತ್‌ಗೆ ಮತ್ತೊಂದು ವಿಮಾನ ಹತ್ತವುದು ಕಷ್ಟವಾಗಲಿಲ್ಲ. ಲೆಬನಾನ್‌ನಲ್ಲಿ ಖಾಸಗಿ ಗಾರ್ಡ್‌ಗಳು ಮತ್ತು ಪೊಲೀಸ್ ಸಿಬ್ಬಂದಿಯ ಭದ್ರತೆ ಖಾತ್ರಿಪಡಿಸಿಕೊಂಡ ನಂತರವೇ ಜಗತ್ತಿಗೆ ತಾನು ಜಪಾನ್‌ನಿಂದ ಪರಾರಿಯಾಗಿರುವ ವಿಷಯವನ್ನು ಅಮೆರಿಕದ ನ್ಯೂಯಾರ್ಕ್‌ನಿಂದ ಸಾರಿ ಹೇಳಿದ.

ಇತ್ತ ಜಪಾನ್ ತನ್ನ ನೆಲದಿಂದ ಘೌನ್ ಹಾರಿದ್ದು ಹೇಗೆಂದು,ಅತ್ತ ಟರ್ಕಿ ಹೇಗೆ ತನ್ನ ನೆಲದಲ್ಲಿ ಇಳಿದನೆಂದು, ಇನ್ನೊಂದೆಡೆ ಫ್ರಾನ್ಸ್ ತಾನು ಇವನಿಗೆ ಯಾವಾಗಪಾಸ್‌ಪೋರ್ಟ್ ಕೊಟ್ಟೆನೆಂದು, ಮಗದೊಂದೆಡೆ ಈಗಾಗಲೇ ಇರುವ ನೂರೆಂಟು ಸಿಕ್ಕುಗಳ ನಡುವೆ ಇದು ಮತ್ತೊಂದು ತಲೆಬೆಸಿ ಆದೀತೆಂದು ಲೆಬನಾನ್ ತಲೆಕೆರೆದುಕೊಳ್ಳುತ್ತಿದ್ದರೆ... ಕಾರ್ಲೊಸ್ ಘೌನ್ ಮಾತ್ರ ನೆಮ್ಮದಿಯಾಗಿ ಮನೆ ತಲುಪಿ ನಿದ್ದೆಗೆ ಜಾರಿದ.

ಲೆಬೆನಾನ್‌ನ ಎಂಟಿವಿ ಸುದ್ದಿ ವಾಹಿನಿ ಈ ರೋಚಕ ಕಥಾನಕವನ್ನು ಕಟ್ಟಿಕೊಡುವುದು ಹೀಗೆ. ಈ ಕಥಾನಕವನ್ನು ವಾಷಿಂಗ್‌ಟನ್ ಪೋಸ್ಟ್ ಪ್ರಶ್ನಿಸಿದೆಯಾದರೂ, ಹಲವು ಮಾಧ್ಯಮಗಳು ಇದನ್ನೇ ಪುನರುಚ್ಚರಿಸಿವೆ.

ಜಪಾನ್‌ಗೆ ಆಘಾತ

ಜಪಾನ್‌ನಿಂದ ಲೆಬನಾನ್‌ಗೆ ಹಾರಿಅಲ್ಲಿಂದಲೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಘೌನ್,‘ನಾನು ಖಂಡಿತ ನ್ಯಾಯದ ಕಣ್ಣಿನಿಂದ ತಪ್ಪಿಸಿಕೊಳ್ಳಲಿಲ್ಲ. ಆದರೆ ಜಪಾನ್ ನ್ಯಾಯಾಲಗಳು ನಡೆಸುವಅನ್ಯಾಯ ಪರವಾದ ಮತ್ತು ರಾಜಕೀಯ ಪ್ರೇರಿತ ವಿಚಾರಣೆಗಳಿಂದ ಬಚಾವಾದೆ’ ಎಂದು ಘೌನ್ ಹೇಳಿಕೆ ನೀಡಿದ್ದಾನೆ. ಇತ್ತ ಜಪಾನ್ ಅಧಿಕಾರಿಗಳು ಘೌನ್‌ಗೆ ಜಾಮೀನು ನೀಡಬೇಕೆಂದು ವಾದಿಸಿದ ವಕೀಲರ ಮೇಲೆ ಮುಗಿಬಿದ್ದಿದ್ದಾರೆ.

ಬ್ರೆಜಿಲ್, ಫ್ರಾನ್ಸ್ ಮತ್ತು ಲೆಬನಾನ್ ಪೌರತ್ವ ಹೊಂದಿರುವ ಘೌನ್‌ನ ಎಲ್ಲ ಪಾಸ್‌ಪೋರ್ಟ್‌ಗಳನ್ನೂ ಜಪಾನ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ದಿನದ 24 ಗಂಟೆಕಣ್ಗಾವಲು ಇದ್ದರೂ ಘೌನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಅಚ್ಚರಿಯ ಸಂಗತಿ.

ಘೌನ್ ಲೆಬನಾನ್ ತಲುಪಿದ ಸುದ್ದಿ ಹೊರಜಗತ್ತಿಗೆ ತಿಳಿದದ್ದು ಸೋಮವಾರ ಸಂಜೆ 6 ಗಂಟೆಗೆ. ಆಗಲೆಬನಾನ್‌ನ ಜಪಾನ್ರಾಯಭಾರಿ ಮತಹಿರೊ ಯಮಗುಚಿ ಔತಣಕೂಟದಲ್ಲಿದ್ದರು. ಘೌನ್ ಪರಾರಿ ವಿಚಾರ ಪ್ರಸ್ತಾಪಿಸಿ, ಲೆಬನಾನ್‌ನಎಂಟಿವಿ ವರದಿಗಾರರು ಪ್ರತಿಕ್ರಿಯೆ ಕೇಳಿದಾಗ, ‘ಜಪಾನ್ ಸರ್ಕಾರಕ್ಕೆ ಈ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದಷ್ಟೇ ಮತಹಿರೊ ಹೇಳಿದರು.

‘ಘೌನ್ ಓರ್ವ ಮುಗ್ಧ ಎಂದು ಜಪಾನ್ ನ್ಯಾಯಾಲಯಗಳಲ್ಲಿ ನಿರೂಪಿಸಲು ಬಯಸಿದ್ದೆ. ಕ್ರಿಸ್‌ಮಸ್ ದಿನ ಕೊನೆ ನೋಡಿದ್ದೇ ಕೊನೆ. ಮತ್ತೆ ಅವರನ್ನು ನೋಡಲಿಲ್ಲ. ಆತ ಲೆಬನಾನ್‌ನಲ್ಲಿನೀಡಿದ ಮಾಧ್ಯಮ ಹೇಳಿಕೆ ಗಮನಿಸಿದಾಗಅವರಿಗೆ ಜಪಾನ್ ಕೋರ್ಟ್‌ಗಳ ಮೇಲೆ ನಂಬಿಕೆಯಿಲ್ಲ ಎಂಬುದು ಅರಿವಾಗಿ, ಬೇಸರವೂ ಆಯಿತು. ಒಂದು ದೊಡ್ಡ ಸಂಘಟನೆಯ ಬಲವಿಲ್ಲದೆ ಇಂಥ ಸಾಹಸ ಮಾಡಲು ಆಗುವುದಿಲ್ಲ. ಆತ ನಮಗೆ ಹೇಗೆ ಇಂಥ ಮೋಸ ಮಾಡಲು ಸಾಧ್ಯವಾಯಿತು ಎಂದು ಪ್ರಶ್ನಿಸಲು ಬಯಸುತ್ತೇನೆ’ಎಂದು ಕತ್ತು ಕೆಳಗೆ ಹಾಕಿದರುಇದೀಗ ಜಪಾನ್ ಕಣ್ಣಿನಲ್ಲಿ ವಿಲನ್ ಆಗಿರುವ ಘೌನ್ ಪರ ವಕೀಲ ಹಿರೊನಾಕಾ.

ಕರೋಲ್ ಘೌನ್

ಹೆಂಡತಿಯ ಸಂಚು

ಘೌನ್ ದೇಶ ತೊರೆದಿರುವ ಬಗ್ಗೆ ಜಪಾನ್‌ನ ವಲಸೆಅಧಿಕಾರಿಗಳ ಬಳಿ ಯಾವುದೇ ಇಲ್ಲ. ಲೆಬನಾನ್‌ನ ಬೈರೂತ್ ವಿಮಾನ ನಿಲ್ದಾಣಕ್ಕೆ ಬೇರೊಂದು ಹೆಸರಿನಲ್ಲಿ ಘೌನ್ ಪ್ರವೇಶಿಸಿರಬಹುದು ಎಂದುಜಪಾನ್ ಸುದ್ದಿ ವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ. ಆದರೆ ಲೆಬನಾನ್ ಅಧಿಕಾರಿಗಳ ಪ್ರಕಾರ ಆತ ಫ್ರಾನ್ಸ್ ಪಾಸ್‌ಪೋರ್ಟ್ ಮತ್ತು ಅಧಿಕೃತ ಗುರುತುಪತ್ರ ನೀಡಿಯೇ ಬೈರೂತ್ ಪ್ರವೇಶಿಸಿದ್ದಾನೆ. ಜಪಾನ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಮೇಲೆಯೂ ಹೇಗೆ ಮತ್ತೊಂದು ಪಾಸ್‌ಪೋರ್ಟ್ ಘೌನ್‌ಗೆ ದೊರಕಿತು ಎಂಬ ಬಗ್ಗೆ ಹಲವು ಮಾಧ್ಯಮಗಳು ಕೇಳಿರುವ ಪ್ರಶ್ನೆಗಳಿಗೆಪ್ರತಿಕ್ರಿಯಸಲುಫ್ರಾನ್ಸ್‌ನ ವಿದೇಶಾಂಗ ಇಲಾಖೆ ನಿರಾಕರಿಸಿದೆ.

ಎಂಟಿವಿ ಸುದ್ದಿವಾಹಿನಿಯ ಪ್ರಕಾರ ಪರಾರಿ ಸಂಚು ರೂಪಿಸಿದ್ದ ಘೌನ್‌ನ ಲೆಬಲಾನಿ ಹೆಂಡತಿ ಕರೋಲ್.

‘ಇದಕ್ಕಾಗಿ ಕರೋಲ್ ಹಲವು ವಾರಗಳ ಸಂಚು ರೂಪಿಸಿದ್ದಳು. ಇದಕ್ಕಾಗಿ ಕಳೆದ ವಾರಾಂತ್ಯದಲ್ಲಿ ಸಾಕಷ್ಟು ಜನರು ಘೌನ್ ಮನೆಯ ಸಮೀಪ ನೆರೆದಿದ್ದರು’ ಘಟನೆಯ ಮಾಹಿತಿ ಇರುವ ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ದೈನಿಕ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

‘ಘೌನ್ ಪರಾರಿ ಸಂಚನ್ನುಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿರುವ ತನ್ನ ಸೋದರರು ಮತ್ತು ಅವರ ಆಪ್ತರ ಸಹಕಾರದೊಂದಿಗೆ ಕರೋಲ್ ರೂಪಿಸಿದ್ದರು. ಜಪಾನ್‌ನಿಂದ ಹಾರಿ ಇಸ್ತಾಂಬುಲ್‌ನಲ್ಲಿ ಇಳಿಯಬೇಕು, ಅಲ್ಲಿಂದ ಲೆಬನಾನ್‌ಗೆ ಹಾರುವ ಮೊದಲು ಘೌನ್ ಕೈಗೆ ಪಾಸ್‌ಪೋರ್ಟ್ ಮತ್ತು ಗುರುತು ಪತ್ರ ಸಿಗಬೇಕುಎನ್ನುವುದು ಕರೋಲ್ ರೂಪಿಸಿದ ಯೋಜನೆಯಾಗಿತ್ತು. ಅದರಂತೆಯೇ ಎಲ್ಲವೂ ನಡೆದಿದೆ’ ಎಂದುಫ್ರಾನ್ಸ್‌ನ ಲೆ ಮಂಡೆ ದಿನಪತ್ರಿಕೆ ಅನಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇಷ್ಟೆಲ್ಲಾ ಬರೆದ ಮೇಲೆ ಇನ್ನೊಂದು ವಾಕ್ಯವನ್ನೂ ಬರೆಯಬೇಕು. ಜಪಾನ್ ದಾಖಲೆಗಳ ಪ್ರಕಾರ ಘೌನ್ ಮತ್ತು ಅವನ ಹೆಂಡತಿ ಕರೋಲ್ 7 ತಿಂಗಳುಗಳಿಂದ ಪರಸ್ಪರ ಮಾತೇ ಆಡಿರಲಿಲ್ಲ!

ಸದ್ಯಕ್ಕೆ ಘೌನ್ ಸೇಫ್

ಜಪಾನ್‌ನೊಂದಿಗೆ ಲೆಬನಾನ್ಅಪರಾಧಿ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ. ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಲ್ಲಿ ಮುಳುಗಿರುವ ಲೆಬನಾನ್ ಸರ್ಕಾರಕ್ಕೆಈಗ ಜಪಾನ್‌ನೊಂದಿಗೆ ಅಂಥದ್ದೊಂದು ಒಪ್ಪಂದ ಮಾಡಿಕೊಂಡು ಘೌನ್ ಹಸ್ತಾಂತರ ಮಾಡುವ ರಿಸ್ಕ್ ತೆಗೆದುಕೊಳ್ಳುವ ಉಸಾಬರಿಯೂ ಬೇಕಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಘೌನ್ ಜಪಾನ್ ಅಧಿಕಾರಿಗಳ ಹಿಡಿತಕ್ಕೆ ಸಿಕ್ಕಿ, ಅಲ್ಲಿನ ನ್ಯಾಯಾಲಯಗಳು ನೀಡುವ ಶಿಕ್ಷೆ ಅನುಭವಿಸುವುದು ಕಷ್ಟ.

ಲೆಬಲಾನ್‌ನಲ್ಲಿ ಘೌನ್‌ಗೆ ವ್ಯಾಪಕ ಜನಬೆಂಬಲವಿದೆ. ಇದನ್ನು ಎದುರು ಹಾಕಿಕೊಳ್ಳುವಂಥ ರಿಸ್ಕ್ ಸಹ ಅಲ್ಲಿನ ಸರ್ಕಾರ ಈಗ ತೆಗೆದುಕೊಳ್ಳಲಾರದು.

ಬ್ರೆಜಿಲ್‌ನಲ್ಲಿ ಲೆಬನಾನ್ ಪೋಷಕರ ಮಗನಾಗಿಜನಿಸಿದ ಘೌನ್ ತನ್ನ 6ನೇ ವಯಸ್ಸಿನಲ್ಲಿ ಲೆಬನಾನ್‌ಗೆ ಹಿಂದಿರುಗಿದ. ಪ್ಯಾರೀಸ್ ವಿಶ್ವವಿದ್ಯಾಲಯಕ್ಕೆ ಉನ್ನತ ಅಧ್ಯಯನಕ್ಕೆ ತೆರಳುವವರೆಗೆ ಲೆಬನಾನ್‌ನಲ್ಲಿಯೇ ವಾಸವಿದ್ದ. ನವೆಂಬರ್ 2018ರಲ್ಲಿ ಜಪಾನಿ ಅಧಿಕಾರಿಗಳು ಬಂಧಿಸಿದ ನಂತರ ಲೆಬನಾನ್ ಸರ್ಕಾರ ಘೌನ್ ಪರವಾಗಿ ನಿಂತಿತ್ತು. ವಿದೇಶದಲ್ಲಿರುವಲೆಬನಾನ್ ಸಾಧಕ, ಘೌನ್ ನಮ್ಮ ಹೆಮ್ಮೆ ಎಂದೇ ಅಲ್ಲಿನ ಸರ್ಕಾರ ಮತ್ತು ಯುವಜನರುಘೌನ್‌ರನ್ನು ಆರಾಧಿಸುತ್ತಿದ್ದರು.ಘೌನ್ ಬಂಧನದ ನಂತರ ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ‘ನಾವೆಲ್ಲರೂ ಕಾರ್ಲೊಸ್ ಘೌನ್’ ಎಂಬ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.