ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ ಚುನಾವಣೆ: ಹಫೀಜ್‌ ಪುತ್ರ, ಅಳಿಯ ಕಣಕ್ಕೆ

Last Updated 21 ಜೂನ್ 2018, 16:21 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಮತ್ತು ಪ್ರಾಂತೀಯ ಚುನಾವಣೆಗಳಲ್ಲಿ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದವಾ (ಜೆಯುಡಿ) ಸಂಘಟನೆಯು 265 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಹಫೀಜ್‌ನ ಪುತ್ರ ಹಾಗೂ ಅಳಿಯ ಕೂಡ ಸ್ಪರ್ಧಿಸಲಿದ್ದಾರೆ. ಪಾಕಿಸ್ತಾನವನ್ನು ‘ಇಸ್ಲಾಂ ಧರ್ಮದ ಕೋಟೆ’ಯನ್ನಾಗಿ ಮಾಡುವ ಭರವಸೆಯನ್ನು ಜೆಯುಡಿಯ ನಿಷೇಧಿತ ರಾಜಕೀಯ ಪಕ್ಷವು ನೀಡಿದೆ.

ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣ ಹಫೀಜ್‌ ತಲೆಗೆ ಅಮೆರಿಕ ಸರ್ಕಾರ ಒಂದು ಕೋಟಿ ಡಾಲರ್‌ (ಅಂದಾಜು ₹ 67 ಕೋಟಿ) ಬಹುಮಾನ ಘೋಷಿಸಿದ್ದು, ಈ ಕಾರಣಕ್ಕೆ ಆತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಲಷ್ಕರ್‌ ಎ ತಯಬಾ ಉಗ್ರ ಸಂಘಟನೆಯ ಅಂಗಸಂಸ್ಥೆಯಾಗಿರುವ ಜೆಯುಡಿ, ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದೆ. ಆದರೆ ಪಾಕಿಸ್ತಾನದ ಚುನಾವಣಾ ಆಯೋಗವು ಈ ಪಕ್ಷದ ನೋಂದಣಿಯನ್ನು ತಿರಸ್ಕರಿಸಿತ್ತು. ಈ ಕಾರಣಕ್ಕೆ ನೋಂದಾಯಿತ ಪಕ್ಷ ಅಲ್ಲಾಹು ಅಕ್ಬರ್‌ ತೆಹರ್ರಿಕ್ (ಎಎಟಿ) ಮೂಲಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಯುಡಿ ತೀರ್ಮಾನಿಸಿದೆ.

‘ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ’ ಎಂದು ಎಂಎಂಎಲ್‌ ಹೇಳಿದೆ.

265 ಮಂದಿ ಅಭ್ಯರ್ಥಿಗಳಲ್ಲಿ 80 ಮಂದಿ ಸಾರ್ವತ್ರಿಕ ಹಾಗೂ 185 ಮಂದಿ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT