ಹೂಸ್ಟನ್, ಅಮೆರಿಕ: ಇಚ್ಚೆಗೆ ವಿರುದ್ಧವಾಗಿ ಹಾಗೂ ಪೋಷಕರ ಗಮನಕ್ಕೆ ತಾರದೇ ಬಾಲಕನೊಬ್ಬನ ಭುಜಗಳ ಮೇಲೆ ಅಮೆರಿಕದ ಹಿಂದೂ ದೇವಸ್ಥಾನವೊಂದರ ಅರ್ಚಕರು ಕಾದ ಕಬ್ಬಿಣದ ಸರಳುಗಳಿಂದ ಹಚ್ಚೆ ಹಾಕಿದ್ದಕ್ಕೆ ಆ ಬಾಲಕನ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

2023ರ ಆಗಸ್ಟ್‌ನಲ್ಲಿ ಅಮೆರಿಕದ ಟೆಕ್ಸಾಸ್ ರಾಜ್ಯದ ಶೂಗರ್‌ಲ್ಯಾಂಡ್‌ನಲ್ಲಿನ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಪೋರ್ಟ್ ಬೆಂಡ್ ಕೌಂಟಿಯ ಭಾರತ ಮೂಲದ ವಿಜಯ್ ಚೇರವು ಎನ್ನುವರ 10 ವರ್ಷದ ಮಗನಿಗೆ ಅರ್ಚಕರು ಹಚ್ಚೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

ಭುಜಗಳ ಮೇಲೆ ವಿಷ್ಣು ದೇವರ ಹಚ್ಚೆಯನ್ನು ಹಾಕಿದ್ದರು.

ಇದರಿಂದ ಬಾಲಕನ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂದು ವಿಜಯ್ ಚೇರವು ಅವರು ದೇವಸ್ಥಾನ ತಮ್ಮ ಮಗನಿಗೆ ಪರಿಹಾರ ರೂಪವಾಗಿ ₹ 8.24 ಕೋಟಿಯನ್ನು ನೀಡಲು ಆದೇಶಿಸಬೇಕು ಎಂದು ಟೆಕ್ಸಾಸ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಸಂತ್ರಸ್ತ ಬಾಲಕ ವಿಜಯ್ ಚೇರವು ಅವರ ಮೊದಲನೇ ಹೆಂಡತಿಯ ಮಗ ಎನ್ನಲಾಗಿದ್ದು, ಆತನ ಗುರುತಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಈ ಕುರಿತು ದೇವಸ್ಥಾನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.