ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla Unrest | ಭಾರತೀಯ ಸಾಂಸ್ಕೃತಿಕ ಕೇಂದ್ರ ಧ್ವಂಸ: 4 ದೇಗುಲಗಳಿಗೆ ಹಾನಿ

Published : 6 ಆಗಸ್ಟ್ 2024, 0:42 IST
Last Updated : 6 ಆಗಸ್ಟ್ 2024, 0:42 IST
ಫಾಲೋ ಮಾಡಿ
Comments
ಢಾಕಾಕ್ಕೆ ಏರ್‌ ಇಂಡಿಯಾ ವಿಮಾನ ಸೇವೆ ರದ್ದು
ನವದೆಹಲಿ (ಪಿಟಿಐ): ಬಾಂಗ್ಲಾದೇಶದಲ್ಲಿ ಸದ್ಯ ಪರಿಸ್ಥಿತಿ ಹದಗೆಟ್ಟಿರುವು ದರಿಂದ ಢಾಕಾಕ್ಕೆ ಸಂಚರಿಸುವ ಎಲ್ಲ ವಿಮಾನಗಳನ್ನು ಏರ್‌ ಇಂಡಿಯಾ ತಕ್ಷಣವೇ ಜಾರಿಗೆ ಬರುವಂತೆ ಸೋಮವಾರದಿಂದಲೇ ರದ್ದುಪಡಿಸಿದೆ. ರಾಷ್ಟ್ರೀಯ ರಾಜಧಾನಿಯಿಂದ ಢಾಕಾಗೆ ನಿತ್ಯ ಏರ್‌ ಇಂಡಿಯಾದ ಎರಡು ವಿಮಾನಗಳು ಸಂಚಾರ ನಡೆಸುತ್ತಿದ್ದವು.  ‘ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ತಕ್ಷಣವೇ ಜಾರಿಗೆ ಬರುವಂತೆ ಢಾಕಾಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳ ನಿಗದಿತ ಕಾರ್ಯಾಚರಣೆಯನ್ನು ನಾವು ರದ್ದುಗೊಳಿಸಿದ್ದೇವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ’ ಎಂದು ಏರ್‌ ಇಂಡಿಯಾದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ– ಬಾಂಗ್ಲಾ ನಡುವೆ ವ್ಯಾಪಾರ ಸ್ಥಗಿತ
ಕೋಲ್ಕತ್ತ (ಪಿಟಿಐ): ಭಾರತ -ಬಾಂಗ್ಲಾದೇಶದ ನಡುವೆ ವ್ಯಾಪಾರವು ಸೋಮವಾರ ಮಧ್ಯಾಹ್ನದಿಂದಲೇ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಇಲ್ಲಿನ ವರ್ತಕರು ತಿಳಿಸಿದ್ದಾರೆ. ಬಾಂಗ್ಲಾದೇಶ ಸರ್ಕಾರವು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮೂರು ದಿನಗಳ ಮಟ್ಟಿಗೆ ವ್ಯಾಪಾರಕ್ಕೆ ರಜೆ ಘೋಷಿಸಿ ಭಾನುವಾರ ಅಧಿಸೂಚನೆ ಹೊರಡಿಸಿತ್ತು.   ‘ಬಾಂಗ್ಲಾದೇಶದ ಕಸ್ಟಮ್ಸ್‌ನಿಂದ ತಮ್ಮ ಬಂದರುಗಳಲ್ಲಿ ಕ್ಲಿಯರೆನ್ಸ್ ಕೊರತೆಯಿಂದಾಗಿ, ಎಲ್ಲ ಭೂ ಬಂದರುಗಳಲ್ಲಿ ರಫ್ತು ಮತ್ತು ಆಮದು ಚಟುವಟಿಕೆಗಳು ಸ್ಥಗಿತಗೊಂಡಿವೆ.
ಲಿಪ್‌ಸ್ಟಿಕ್‌, ಸೋಫಾ ಎತ್ತೊಯ್ದರು
lಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ರಾಜೀನಾಮೆ ಬೆನ್ನಲ್ಲೇ, ಢಾಕಾದಲ್ಲಿನ ಅವರ ಅಧಿಕೃತ ನಿವಾಸವಾದ ಗಾನಾಭವನಕ್ಕೆ ನುಗ್ಗಿದ ಪ್ರತಿಭಟನಕಾರರು, ಅಲ್ಲಿನ ಆವರಣದಲ್ಲಿ ಹರಿಯುವ ನದಿಯಲ್ಲಿ ಮಿಂದು ಸಂಭ್ರಮಿಸಿದರು lಪ್ರಧಾನಿ ನಿವಾಸದಿಂದ ಸೋಫಾ, ಕುರ್ಚಿ, ಹೂಕುಂಡಗಳನ್ನು ತೆಗೆದುಕೊಂಡು ಹೋದ ಪ್ರತಿಭಟನಕಾರರು lಒಬ್ಬ ಪ್ರತಿಭಟನಕಾರ ಲಿಪ್‌ಸ್ಟಿಕ್‌ ತೆಗೆದುಕೊಂಡು ಹೋದರು. ‘ನಮ್ಮ ಹೋರಾಟದ ಮೂಲಕ ನಿರಂಕುಶಾಧಿಕಾರಿಯನ್ನು ತೊಲಗಿಸಿದ್ದೇವೆ. ಅವರು ಈ ಲಿಪ್‌ಸ್ಟಿಕ್‌ ಅನ್ನು ಬಳಸುತ್ತಿದ್ದರು. ಹೋರಾಟದ ಸ್ಮರಣೆಗೆ ಇದನ್ನು ತೆಗೆದುಕೊಂಡಿದ್ದೇನೆ’ ಎಂದು ಆ ವ್ಯಕ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು
ಶೇಖ್ ಹಸೀನಾ ಅವರು ರಾಜಕೀಯ ಪುನರಾಗಮನ ಮಾಡುವುದಿಲ್ಲ. ಅವರು ತಮ್ಮ ಕುಟುಂಬದ ಒತ್ತಾಯದ ಮೇರೆಗೆ ಸುರಕ್ಷತೆಗಾಗಿ ದೇಶ ತೊರೆದಿದ್ದಾರೆ
ಸಜೀಬ್ ವಾಝೆದ್ ಜಾಯ್ ಹಸೀನಾ ಅವರ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT