ಬೀಜಿಂಗ್: ಚೀನಾದ ದೂರಸಂಪರ್ಕ ಕಂಪನಿ ‘ಹುವಾವೆ ಟೆಕ್ನಾಲಜೀಸ್ ಕೊ’ ಭಾರತದಲ್ಲಿನ ಆದಾಯದ ಗುರಿಯಲ್ಲಿ ಈ ವರ್ಷ (2020) ಶೇ 50ರಷ್ಟನ್ನು ಕಡಿತಗೊಳಿಸಿದೆ. ಜತೆಗೆ ಅರ್ಧಕ್ಕಿಂತಲೂ ಹೆಚ್ಚು ಭಾರತೀಯ ಸಿಬ್ಬಂದಿಯನ್ನು ವಜಾಗೊಳಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಈ ಹಿಂದೆ ಹವಾವೆಯು 2020ರಲ್ಲಿ ಭಾರತದಲ್ಲಿ 700ರಿಂದ 800 ದಶಲಕ್ಷ ಡಾಲರ್ ಆದಾಯ ಗಳಿಸುವ ಗುರಿ ಹಾಕಿಕೊಂಡಿತ್ತು. ಇದೀಗ ಅದನ್ನು 350ರಿಂದ 500 ದಶಲಕ್ಷ ಡಾಲರ್ಗೆ ಇಳಿಕೆ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ:ಟಿಕ್ಟಾಕ್ ಲೈಟ್, ಹೆಲೊ ಲೈಟ್, ಶೇರ್ ಇಟ್ ಲೈಟ್ ಸೇರಿ ಚೀನಾದ 47 ಆ್ಯಪ್ ನಿಷೇಧ

ಸಂಶೋಧನೆ, ಅಭಿವೃದ್ಧಿ, ಜಾಗತಿಕ ಸೇವಾ ಕೇಂದ್ರದಿಂದ ಸೇರಿದಂತೆ ಒಟ್ಟು ಶೇ 60ರಿಂದ 70ರಷ್ಟು ಭಾರತೀಯ ಸಿಬ್ಬಂದಿಯನ್ನು ಹುವಾವೆ ವಜಾಗೊಳಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.

ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಭಾರತ–ಚೀನಾ ಸೇನಾಪಡೆಗಳ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ಹುವಾವೆ ಈ ಕ್ರಮಕ್ಕೆ ಮುಂದಾಗಿದೆ. ಉಭಯ ದೇಶಗಳ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಬಳಿಕ ಚೀನಾದ 59 ಆ್ಯಪ್ಗಳನ್ನು ಭಾರತ ಸರ್ಕಾರ ನಿಷೇಧಿಸಿತ್ತು. ಮುಂದುವರಿದು ಇನ್ನೂ 47 ಆ್ಯಪ್ಗಳನ್ನು ಇಂದು (ಸೋಮವಾರ) ನಿಷೇಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.