ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್(65) ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದರು. ಸಮಾರಂಭದಲ್ಲಿಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಭಾಗಿಯಾದರು.

ಪಾಕಿಸ್ತಾನ ತೆಹ್ರೀಕ್-ಎ- ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.ಹೊಸದಾಗಿ ರಚನೆಯಾದ ರಾಷ್ಟ್ರೀಯ ಅಸೆಂಬ್ಲಿ ಶುಕ್ರವಾರ ವಿಶ್ವಾಸ ಮತಯಾಚನೆಯಲ್ಲಿ ಇಮ್ರಾನ್ಖಾನ್ ಅವರಿಗೆ ಸರಳ ಬಹುಮತ ನೀಡುವ ಮೂಲಕ ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿತ್ತು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಇಮ್ರಾನ್ ಖಾನ್ ನೀಡಿದ್ದ ಆಹ್ವಾನ ಸ್ವೀಕರಿಸಿದ್ದ ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾದರು. ಇದೇ ಸಮಾರಂಭದಲ್ಲಿ ಪಾಕಿಸ್ತಾನ ಸೇನಾ ದಂಡ ನಾಯಕ ಖಮರ್ ಜಾವೆದ್ ಬಾಜ್ವಾ ಅವರು ಸಿಧು ಅವರ ಕೈಕುಲುಕಿ ಮಾತನಾಡಿದ್ದು ಮಾಧ್ಯಮಗಳ ಗಮನ ಸೆಳೆಯಿತು.

ಕಿಸ್ತಾನ ಮುಸ್ಲಿಂ ಲೀಗ್– ನವಾಜ್ (ಪಿಎಂಎಲ್–ಎನ್) ಅಧ್ಯಕ್ಷ ಶಹಬಾಜ್ ಷರೀಫ್ ಅವರು ಸಹ ಪ್ರಧಾನಿ ಹುದ್ದೆಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಇಮ್ರಾನ್ ವಿರುದ್ಧ ಒಗ್ಗಟ್ಟಾಗಿ ಸ್ಪರ್ಧಿಸಿದ್ದ 11 ಪಕ್ಷಗಳಲ್ಲೇ ಶಹಬಾಜ್ ಷರೀಫ್ ಅವರ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಹೀಗಾಗಿ, ಇಮ್ರಾನ್ ಅವರ ಹಾದಿ ಮತ್ತಷ್ಟು ಸುಗಮವಾಯಿತು.

ಇಮ್ರಾನ್ ಅವರಿಗೆ 176 ಮತ್ತು ಶಹಬಾಜ್ ಷರೀಫ್ ಅವರಿಗೆ 96 ಮತಗಳು ದೊರೆತವು. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) 54 ಸಂಸದರು ಮತದಾನದಲ್ಲಿ ಭಾಗವಹಿಸಿರಲಿಲ್ಲ.
(ಪ್ರಮಾಣ ವಚನ ಸ್ವೀಕಾರದ ವೇಳೆ ತಡವರಿಸಿದ ಇಮ್ರಾನ್ ಖಾನ್)

ಜುಲೈ 25ರಂದು ನಡೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಅವರ ಪಿಟಿಐ ಪಕ್ಷ 116 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 9 ಮಂದಿ ಸ್ವತಂತ್ರ್ಯ ಅಭ್ಯರ್ಥಿಗಳು, 60 ಮಹಿಳಾ ಸ್ಥಾನಗಳ ಪೈಕಿ 28 ಹಾಗೂ 10 ಅಲ್ಪ ಸಂಖ್ಯಾತ ಸಮುದಾಯಗಳ ಪೈಕಿ 5 ಸ್ಥಾನಗಳ ಬೆಂಬಲದೊಂದಿಗೆ ಒಟ್ಟು 158 ಸದಸ್ಯರ ಬೆಂಬಲದೊಂದಿಗೆ ಪಾಕಿಸ್ತಾನದಲ್ಲಿ ಮತ್ತೆ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.