ವಾಷಿಂಗ್ಟನ್: ಭಾರತವು ಅಮೆರಿಕದ ಜಾಗತಿಕ ಕಾರ್ಯತಂತ್ರದ ಪಾಲುದಾರ ದೇಶ ಎಂದು ಬೈಡನ್ ಸರ್ಕಾರ ಹೇಳಿದೆ.

‘ಭಾರತಕ್ಕೆ ಮತ್ತು ಭಾರತದ ಕುರಿತು ನಮ್ಮ ಸಂದೇಶವು ಸ್ಥಿರವಾಗಿದೆ. ಭಾರತವು ಅಮೆರಿಕದ ಜಾಗತಿಕ ಕಾರ್ಯತಂತ್ರದ ಪಾಲುದಾರ. ಎರಡೂ ದೇಶಗಳ ಸಚಿವರ, ನಾಯಕರ ಹಂತದ ಮಾತುಕತೆಗಳು ಈಗಾಗಲೇ ನಮ್ಮ ನಡುವೆ ಇರುವ ನಿಕಟ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸಿದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರಿಗೆ ಹೇಳಿದ್ದಾರೆ.

ಉಭಯ ದೇಶಗಳ ಸಂಬಂಧ ರಾಜಕೀಯ, ರಾಜತಾಂತ್ರಿಕತೆ, ಆರ್ಥಿಕತೆ, ಭದ್ರತೆ ಮತ್ತು ಪ್ರಮುಖವಾಗಿ ಜನ ಸಂಪರ್ಕ ಕೇಂದ್ರಿತವಾಗಿದೆ.

ಅಮೆರಿಕದಲ್ಲಿ ಸ್ಪಂದನಶೀಲ ಭಾರತೀಯರು ಇದ್ದಾರೆ. ಭಾರತದಲ್ಲಿ ಅಮೆರಿಕದ ಖಾಸಗಿ ವಲಯದ ಮೇಲೆ ಒಲವು ಹೆಚ್ಚಿದೆ ಎಂದು ಅವರು ಹೇಳಿದರು.

ಎರಡೂ ದೇಶಗಳು ವಿವಿಧ ವಿಷಯಗಳಲ್ಲಿ ಪರಸ್ಪರ ಸಂಬಂಧ ಹೊಂದಿವೆ. ಆದ್ದರಿಂದ ಪ್ರತಿ ಬಾರಿಯೂ ಭಾರತೀಯ ಸಹವರ್ತಿಗಳೊಂದಿಗೆ ಭೇಟಿಯಾಗಲು ಅವಕಾಶವನ್ನು ಕಲ್ಪಿಸಿಕೊಳ್ಳುತ್ತೇವೆ. ಇವೆಲ್ಲವೂ ಈಗಾಗಲೇ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಧೃಡಗೊಳಿಸಲುವ ಪ್ರಯತ್ನವಾಗಿದೆ ಎಂದು ಪ್ರೈಸ್ ಹೇಳಿದ್ದಾರೆ.

ಇವನ್ನೂ ಓದಿ: ಜರ್ಮನಿಯ ಹ್ಯಾಂಬರ್ಗ್ ಚರ್ಚ್ನಲ್ಲಿ ಗುಂಡಿನ ದಾಳಿ: ಕನಿಷ್ಠ 6 ಸಾವು

ಇಸ್ರೇಲ್ ಪ್ರಧಾನಿ ನೇತನ್ಯಾಹುಗೂ ತಟ್ಟಿದ ಪ್ರತಿಭಟನೆ ಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.