ವಿಶ್ವಸಂಸ್ಥೆ: ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಭಾರತವು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ. ಇದರೊಂದಿಗೆ ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.

ಕಾಶ್ಮೀರದಲ್ಲಿನ ಗಲಭೆಗಳನ್ನು ಉಲ್ಲೇಖಿಸಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದ ಮಾಡಿದ್ದ ಮಂಡಳಿಯ ಹೈಕಮಿಷನರ್ ಜಿಯಾದ್ ರಾದ್ ಅಲ್ ಹುಸೇನ್ ಅವರು, ಈ ಕುರಿತು ತನಿಖೆ ನಡೆಸುವಂತೆ ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗೆ ಶಿಫಾರಸು ಮಾಡಿದ್ದರು.

ಅವರ ಉತ್ತರಾಧಿಕಾರಿಯಾಗಲಿರುವ ಮಿಚೇಲ್ ಬ್ಯಾಚಲೆಟ್ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೇರಸ್ ಅವರುಹುಸೇನ್ ಶಿಫಾರಸ್ಸನ್ನು ಬೆಂಬಲಿಸಿದ್ದರು. ಮಂಡಳಿಯಲ್ಲಿರುವ ಪಾಕಿಸ್ತಾನವೂ ಸಹಮತ ವ್ಯಕ್ತಪಡಿಸಿತ್ತು. ಆದರೆ ಉಳಿದ ಯಾವುದೇ ದೇಶಗಳು ಹುಸೇನ್ ಶಿಫಾರಸ್ಸಿಗೆ ಬೆಂಬಲ ನೀಡಿರಲಿಲ್ಲ. ಹೀಗಾಗಿಭಾರತವು ಮಂಡಳಿಗೆ ಆಯ್ಕೆಯಾಗಿರುವುದು ಮಹತ್ವ ಪಡೆದುಕೊಂಡಿದೆ.

ಶುಕ್ರವಾರ ಮಂಡಳಿಗೆ ನಡೆದ ಮತದಾನ ಪ್ರಕ್ರಿಯೆ ವೇಳೆವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದವು.ಭಾರತವು ಒಟ್ಟು 188 ಮತಗಳನ್ನು ಪಡೆದುಕೊಂಡಿತು.ರೋಹಿಂಗ್ಯಾ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಬಾಂಗ್ಲಾದೇಶ178 ಮತ ಗಳಿಸಿತು.

ಏಷ್ಯಾ–ಪೆಸಿಫಿಕ್ ಪ್ರದೇಶಕ್ಕೆ ತೆರವಾಗಿದ್ದ ಐದು ಸ್ಥಾನಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರತ, ಬಾಂಗ್ಲಾ ಹೊರತುಪಡಿಸಿ ಏಷ್ಯಾ–ಪೆಸಿಫಿಕ್ ಪ್ರದೇಶದಿಂದ ಚುನಾಯಿತವಾದ ಉಳಿದ ಮೂರು ದೇಶಗಳೆಂದರೆ ಬಹರೇನ್, ಫಿಜಿ ಮತ್ತು ಫಿಲಿಪೈನ್ಸ್.

ಸದ್ಯ 47 ಸದಸ್ಯ ಬಲದ ಮಂಡಳಿಗೆ ಭಾರತವು ಜನವರಿಯಲ್ಲಿ ಸೇರ್ಪಡೆಯಾಗಲಿದ್ದು, ಏಷ್ಯಾ–ಪೆಸಿಫಿಕ್ ಭಾಗದ ಚೀನಾ, ನೇಪಾಳ, ಹಾಗೂ ಪಾಕಿಸ್ತಾನ ಜತೆ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸಲಿದೆ.

ಮಂಡಳಿಗೆ ನಾಮನಿರ್ದೇಶನಗೊಂಡ ಬಳಿಕ ಭಾರತವು,ವರ್ಣಭೇದ – ಜನಾಂಗೀಯ ತಾರತಮ್ಯ ಮತ್ತು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಪ್ರತಿಪಾದಿಸಿದೆ.

2006ರಲ್ಲಿ ಭಾರತವು ಮೊದಲ ಬಾರಿ ಚುನಾಯಿತವಾಗಿತ್ತು. ಬಳಿಕ2007, 2011 ಮತ್ತು 2014ರಲ್ಲಿಆಯ್ಕೆಯಾಗಿತ್ತು.ಯಾವುದೇ ದೇಶವು ಮಂಡಳಿಗೆ ಸತತ ಎರಡು ಬಾರಿ ಮಾತ್ರವೇ ಆಯ್ಕೆಯಾಗಲು ಮಾತ್ರವೇ ಅವಕಾಶವಿದೆ. 2017ರಲ್ಲಿ ಅವಧಿ ಮುಗಿದ ಬಳಿಕ ಭಾರತ, 1 ವರ್ಷ ಕಾಲಮಂಡಳಿಯ ಅಧಿಕಾರದಿಂದ ದೂರವಿತ್ತು.

ಮಂಡಳಿಯಲ್ಲಿ ಒಟ್ಟು 47 ಸದಸ್ಯ ರಾಷ್ಟ್ರಗಳಿದ್ದು, ಸಮಾನ ಪ್ರಾದೇಶಿಕ ವಿತರಣಾನೀತಿ ಆಧರಿಸಿ ಏಷ್ಯಾ-ಪೆಸಿಫಿಕ್ ಭಾಗಕ್ಕೆ ಒಟ್ಟು 13 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.ಆಫ್ರಿಕಾದ ಪ್ರದೇಶಕ್ಕೆ 13, ಪೂರ್ವ ಯೂರೋಪ್ ಪ್ರದೇಶವು 6, ಪಶ್ಚಿಮ ಯೂರೋಪ್ 7,ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶಕ್ಕೆ ತಲಾ 8 ಸ್ಥಾನಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.