ಸಿಂಗಪುರ: ಭಾರತ ಮತ್ತು ಸಿಂಗಪುರ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಗೆ ಏರಿಸಲು ಒಪ್ಪಿಕೊಂಡಿದ್ದು, ಸೆಮಿಕಂಡಕ್ಟರ್ ಕ್ಷೇತ್ರದ ಸಹಭಾಗಿತ್ವ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದವು.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಜತೆ ಮಾತುಕತೆ ನಡೆಸಿದ್ದು, ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದರು.

‘ಭಾರತ–ಸಿಂಗಪುರ ನಡುವಣ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದ್ದು, ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಸ್ಥಾಪಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.

‘ಸುಧಾರಿತ ಉತ್ಪಾದನೆ, ಸಂಪರ್ಕ, ಡಿಜಿಟಲೀಕರಣ, ಆರೋಗ್ಯ ಮತ್ತು ಔಷಧ, ಕೌಶಲಾಭಿವೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿ ಒಳಗೊಂಡಂತೆ ದ್ವಿಪಕ್ಷೀಯ ಸಂಬಂಧದ ವಿವಿಧ ಆಯಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು’ ಎಂದು ತಿಳಿಸಿದ್ದಾರೆ.

‘ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧವು ಹೊಂದಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಸಹಭಾಗಿತ್ವವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ನಿರ್ಧರಿಸಲಾಯಿತು. ಇದು ಭಾರತದ ‘ಆ್ಯಕ್ಟ್ ಈಸ್ಟ್’ ನೀತಿಗೆ ಉತ್ತೇಜನವನ್ನು ನೀಡಲಿದೆ’ ಎಂದಿದ್ದಾರೆ.

ಭಾರತದೊಳಗೆ ಹಲವು ‘ಸಿಂಗಪುರ’: ‘ನಾವು ಭಾರತದೊಳಗೆ ಹಲವು 'ಸಿಂಗಪುರ' ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಅದನ್ನು ಈಡೇರಿಸಲು ಸಿಂಗಪುರ ಸರ್ಕಾರವು ಸಹಕಾರ ನೀಡುತ್ತಿರುವುದು ಸಂತಸ ತಂದಿದೆ’ ಎಂದು ವಾಂಗ್ ಜತೆಗಿನ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಹೇಳಿದರು.

‘ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಹೊಂದಿರುವ ಸಮಾನ ರೀತಿಯ ನಂಬಿಕೆಯು ನಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ. ನನ್ನ ಮೂರನೇ ಅವಧಿಯ ಆರಂಭದಲ್ಲೇ ಸಿಂಗಪುರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ಉಂಟಾಗಿದೆ’ ಎಂದರು.

ಭಾರತ ಮತ್ತು ಸಿಂಗಪುರ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಒತ್ತಿ ಹೇಳಿದ ಪ್ರಧಾನಿ, ‘ಕಳೆದ 10 ವರ್ಷಗಳಲ್ಲಿ ನಮ್ಮ ವ್ಯಾಪಾರ ಸಂಬಂಧ ದ್ವಿಗುಣಗೊಂಡಿದೆ. ಪರಸ್ಪರ ಹೂಡಿಕೆಯು ಸುಮಾರು ಮೂರು ಪಟ್ಟು ಹೆಚ್ಚಾಗಿದೆ’ ಎಂದು ತಿಳಿಸಿದರು.

ಸಿಂಗಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ 3.5 ಲಕ್ಷ ಜನರು ಎರಡೂ ದೇಶಗಳ ನಡುವಣ ಬಾಂಧವ್ಯಕ್ಕೆ ಭದ್ರ ಬುನಾದಿಯಾಗಿದ್ದಾರೆ
ನರೇಂದ್ರ ಮೋದಿ ಪ್ರಧಾನಿ

‘ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ’

ಭಾರತವು ವಿದೇಶಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರದ ಮೊದಲ ಕೇಂದ್ರವು ಸಿಂಗಪುರದಲ್ಲಿ ತಲೆ ಎತ್ತಲಿದೆ ಎಂದು ಪ್ರಧಾನಿ ಮೋದಿ ಅವರು ಘೋಷಿಸಿದರು. ‘ಭಾರತದ ಮೊದಲ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವು ಸಿಂಗಪುರದಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂಬುದನ್ನು ನಿಮಗೆ ತಿಳಿಸಲು ಸಂತಸವಾಗುತ್ತಿದೆ. ಮಹಾನ್ ಸಂತ ಕವಿಯಾಗಿದ್ದ ತಿರುವಳ್ಳುವರ್ ಅವರು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದೆನಿಸಿರುವ ತಮಿಳಿನಲ್ಲಿ ಮಾರ್ಗದರ್ಶಿ ಚಿಂತನೆಗಳನ್ನು ಒದಗಿಸಿದರು. ಅವರ ಕೃತಿ ‘ತಿರುಕ್ಕುರಲ್’ ಸುಮಾರು 2000 ವರ್ಷಗಳ ಹಿಂದೆ ರಚಿಸಲ್ಪಟ್ಟಿದೆಯಾದರೂ ಅದರಲ್ಲಿನ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಹೇಳಿದರು. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯ ಉತ್ತೇಜನಕ್ಕೆ ಸಿಂಗಪುರದಲ್ಲಿ ‘ಇನ್ವೆಸ್ಟ್ ಇಂಡಿಯಾ’ ಕಚೇರಿಯನ್ನು ತೆರೆಯುವುದಾಗಿಯೂ ಪ್ರಕಟಿಸಿದರು.

ವಾಂಗ್ ನಾಯಕತ್ವ; ಮೋದಿ ಮೆಚ್ಚುಗೆ

* ಸಿಂಗಪುರದ ನಾಲ್ಕನೇ ತಲೆಮಾರಿನ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ ಲಾರೆನ್ಸ್ ವಾಂಗ್ ನೇತೃತ್ವದಲ್ಲಿ ಸಿಂಗಪುರದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಹೇಳಿದರು.

* ಭಾರತ-ಸಿಂಗಪುರ ನಡುವಣ ಸಂಬಂಧವು 2025ರಲ್ಲಿ ತನ್ನ 60ನೇ ವರ್ಷ ಆಚರಿಸಲಿದೆ. ಈ ಸಂದರ್ಭವನ್ನು ಸ್ಮರಣೀಯವನ್ನಾಗಿಸಲು ಉಭಯ ದೇಶಗಳು ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕೆಂದು ಮೋದಿ ಕರೆ ನೀಡಿದರು.

* ಕಳೆದ 10 ವರ್ಷಗಳಲ್ಲಿ ಸಿಂಗಪುರದ 17 ಉಪಗ್ರಹಗಳನ್ನು ಭಾರತದ ನೆಲದಿಂದ ಉಡಾವಣೆ ಮಾಡಲಾಗಿದೆ ಎಂದು ತಿಳಿಸಿದರು.

* ಮೋದಿ ಅವರು ಸಿಂಗಪುರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.