ವಾಷಿಂಗ್ಟನ್: ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಾರತವು ಗಾಂಧಿ ತತ್ವ–ಚಿಂತನೆಗಳ ಕುರಿತು ಗುರುವಾರ ಕಾರ್ಯಕ್ರಮ ನೀಡಲಿದೆ.

ಆರ್ಥಿಕ ಮತ್ತು ಸಾಮಾಜಿಕ ಶಾಂತಿಗಾಗಿರುವ ವಿಶ್ವವಿದ್ಯಾಲಯ ಮಂಡಳಿ ಹಾಗೂ ವಿಶ್ವಸಂಸ್ಥೆಗಾಗಿ ಭಾರತದ ಶಾಶ್ವತ ಯೋಜನಾ ಮಂಡಳಿಯು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಅನೇಕ ದೇಶಗಳ ರಾಜತಾಂತ್ರಿಕ ವಕ್ತಾರರು ಭಾಗವಹಿಸುವ ನಿರೀಕ್ಷೆಯಿದೆ.

ಇದಕ್ಕೆ ಸಂಬಂಧಿಸಿ ಮಾಡಿರುವ ಟ್ವೀಟ್ನಲ್ಲಿ ಕಾರ್ಯಕ್ರಮದ ಆಯೋಜಕರು, ‘ಶಾಂತಿ ಮಾರ್ಗದಿಂದ ವಿಶ್ವವವನ್ನೇ ಗೆಲ್ಲಬಹುದು‘ ಎಂಬ ಮಹಾತ್ಮ ಗಾಂಧಿ ಅವರ ತತ್ವವನ್ನು ಉಲ್ಲೇಖಿಸಿದ್ದಾರೆ.

‘ಪ್ರತಿಕೂಲ ಸನ್ನಿವೇಶ ಎದುರಿಸಲು ಇರಬೇಕಾದ ಜೀವನಶೈಲಿ, ಪ್ರಜಾಪ್ರಭುತ್ವ ಹಾಗೂ ಬಹುತ್ವದ ಮೂಲಕ ಶಾಂತಿಯುತ ಸಮಾಜಕ್ಕೆ ಸಹಕಾರಿಯಾಗಬಲ್ಲ ಮಹಾತ್ಮ ಗಾಂಧಿ ಅವರ ವಿಚಾರಧಾರೆಯು ಕಾರ್ಯಕ್ರಮದ ಮುಖ್ಯ ವಿಷಯವಾಗಿದೆ‘ ಎಂದು ವಿಶ್ವಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.