ಲಂಡನ್:ಭಾರತದ ಹೋರಾಟಗಾರ್ತಿ ತ್ರಿಷಾ ಶೆಟ್ಟಿ ಅವರು ಹವಾಮಾನ ಬದಲಾವಣೆಗಾಗಿ ‘ತುರ್ತು ಪರಿಸ್ಥಿತಿ’ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

140 ದೇಶಗಳ 2,000 ಜನಪ್ರಿಯ ವ್ಯಕ್ತಿಗಳು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ, ತ್ರಿಷಾ ಶೆಟ್ಟಿ ಸೇರಿದಂತೆ ಜಗತ್ತಿನ 20 ಪ್ರಮುಖ ಹೋರಾಟಗಾರರುಗುರುವಾರ ಬಹಿರಂಗ ಪತ್ರವನ್ನು ಬರೆದಿದ್ದು,ವಿಶ್ವದ ನಾಗರಿಕರು ಮತ್ತು ಭೂಮಿಯ ರಕ್ಷಣೆಗಾಗಿ ‘ತುರ್ತು ಪರಿಸ್ಥಿತಿ’ ಘೋಷಿಸುವಂತೆ ಕರೆ ನೀಡಿದ್ದಾರೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟ್‌ರೆಸ್ ಅವರು2020ನೇ ದಶಕವನ್ನು ‘ಕ್ರಿಯಾ ದಶಕ’, ಪ್ರಸಕ್ತ ವರ್ಷವನ್ನು ‘ತುರ್ತಿನ ವರ್ಷ’ ಎಂದು ವಾರದ ಹಿಂದೆ ಘೋಷಿಸಿದ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆದಿದ್ದಾರೆ.

‘ಸುಸ್ಥಿರ ಅಭಿವೃದ್ಧಿ ಗುರಿಗಳ ಜಾರಿಗೆ ಜಾಗತಿಕ ನಾಯಕರು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು.ಇದರಿಂದ ವಿಮುಖರಾಗಬಾರದು. ಅಸಾಮಾನ್ಯಶಕ್ತಿಗಳ ಜೊತೆಗೂಡಿ ಈ ಪತ್ರವನ್ನು ಬರೆದಿರುವ ಹೆಮ್ಮೆ ನನಗಿದೆ’ ಎಂದು ತ್ರಿಷಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.