ಬೀಜಿಂಗ್: ಈ ತಿಂಗಳ ಕೊನೆಯಲ್ಲಿ ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್ -2022 ಮಿಲಿಟರಿ ತಾಲೀಮಿನಲ್ಲಿ ತಮ್ಮ ಸೈನಿಕರು ಭಾಗವಹಿಸಲಿದ್ದಾರೆ ಎಂದು ಚೀನಾ ಬುಧವಾರ ತಿಳಿಸಿದೆ. ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಭಾಗವಹಿಸುವಿಕೆಯೂ ಇರಲಿದೆ ಎಂದು ಅದು ಹೇಳಿದೆ.

ಚೀನಾ ಮತ್ತು ರಷ್ಯಾ ಮಿಲಿಟರಿಗಳ ನಡುವಿನ ವಾರ್ಷಿಕ ಸಹಕಾರ ಯೋಜನೆ ಹಾಗೂ ಎರಡು ಕಡೆಯ ಒಮ್ಮತದ ಪ್ರಕಾರ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಂದಿನ ದಿನಗಳಲ್ಲಿ ಮಿಲಿಟರಿ ತಾಲೀಮಿನಲ್ಲಿ ಭಾಗವಹಿಸಲು ಕೆಲವು ಸೈನಿಕರನ್ನು ರಷ್ಯಾಕ್ಕೆ ಕಳುಹಿಸಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಲ್ಲಿ ಭಾರತ, ಬೆಲಾರಸ್, ತಜಕಿಸ್ತಾನ್, ಮಂಗೋಲಿಯಾ ಮತ್ತು ಇತರ ದೇಶಗಳು ಸಹ ಭಾಗವಹಿಸಲಿವೆ ಎಂದು ಅದು ಹೇಳಿದೆ.

ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್-2022 ಸೇನಾ ಸಮರಾಭ್ಯಾಸದಲ್ಲಿ ಭಾರತೀಯ ಸೈನಿಕರು ಭಾಗವಹಿಸುವ ಕುರಿತು ಭಾರತೀಯ ಸೇನೆ ಅಥವಾ ರಕ್ಷಣಾ ಸಚಿವಾಲಯದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕಳೆದ ವರ್ಷ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 17 ದೇಶಗಳು ಭಾಗವಹಿಸಿದ್ದ ರಷ್ಯಾದಲ್ಲಿ ನಡೆದ ಜಪಾಡ್– 2021ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸಿತ್ತು.

ವೋಸ್ಟಾಕ್-2022 ಸಮರಾಭ್ಯಾಸವು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವೋಸ್ಟಾಕ್ -2022 ಸಮರಾಭ್ಯಾಸವು ರಷ್ಯಾದ ಸೇನಾ ಮುಖ್ಯಸ್ಥ ವ್ಯಾಲೆರಿ ಗೆರಾಸಿಮೊವ್ ಅವರ ನೇತೃತ್ವದಲ್ಲಿ ಪೂರ್ವ ಮಿಲಿಟರಿ ಜಿಲ್ಲೆಯ 13 ತರಬೇತಿ ಮೈದಾನಗಳಲ್ಲಿ ನಡೆಯಲಿದೆ ಎಂದು ಟಾಸ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.