ಜೊಹಾನಸ್‌ಬರ್ಗ್: ಜಿಂಬಾಬ್ವೆಯ ನೈರುತ್ಯ ಭಾಗದಲ್ಲಿ ವಜ್ರದ ಗಣಿ ಹೊಂದಿರುವ ಹರ್ಪಾಲ್ ರಾಂಧವಾ ಹಾಗೂ ಅವರ ಪುತ್ರ ಸೇರಿ ಆರು ಜನ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಘಟನೆ ಸೆ. 29ರಂದು ನಡೆದಿದ್ದು, ಸೋಮವಾರ ವರದಿಯಾಗಿದೆ. ರಿಯಾನ್‌ಝಿಮ್ ಎಂಬ ಗಣಿಯ ಮಾಲೀಕರಾದ ರಾಂಧವಾ, ಚಿನ್ನ, ಕಲ್ಲಿದ್ದಲ್ಲು, ನಿಕ್ಕಲ್, ತಾಮ್ರದ ಗಣಿಗಾರಿಕೆಯನ್ನೂ ನಡೆಸುತ್ತಿದ್ದರು. ಇವರ ತಮ್ಮ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹರಾರೆ ಬಳಿಯ ಮಾಷವಾ ಎಂಬಲ್ಲಿ ವಿಮಾನ ಪತನಗೊಂಡಿದೆ.

ಹಾರಾಟ ಸಂದರ್ಭದಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದ ವಿಮಾನ ಪತನಗೊಂಡಿತು. ವಿಮಾನ ಸಿಬ್ಬಂದಿ ಸೇರಿದಂತೆ ಆರೂ ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತಪಡಿಸಿರುವುದಾಗಿ ದಿ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಮೃತಪಟ್ಟವರ ಗುರುತು ಪತ್ತೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ರಾಂಧವಾ ಅವರ ಸ್ನೇಹಿತರಾದ ಪತ್ರಕರ್ತ ಹಾಗೂ ಸಿನಿಮಾ ನಿರ್ಮಾಪಕ ಹೋಪ್‌ವೆಲ್ ಚಿನೊನೊ ಘಟನೆಯನ್ನು ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.