ಹ್ಯೂಸ್ಟನ್: ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಮೂರನೇ ಬಾರಿಗೆ ಜೂನ್ 1 ಮತ್ತು ಜೂನ್ 5ರ ನಡುವೆ ಅಂತರಿಕ್ಷ ಯಾನ ಕೈಗೊಳ್ಳಲಿದ್ದಾರೆ. ತಾಂತ್ರಿಕ ದೋಷದಿಂದಾಗಿ ‘ಸ್ಟಾರ್‌ಲೈನರ್’ ಅಂತರಿಕ್ಷ ನೌಕೆಯ ಉಡಾವಣೆಯನ್ನು ಈ ತಿಂಗಳ ಆರಂಭದಲ್ಲಿ ಮುಂದೂಡಲಾಗಿತ್ತು.

58 ವರ್ಷ ವಯಸ್ಸಿನ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಈ ಪರೀಕ್ಷಾರ್ಥ ನೌಕೆಯಲ್ಲಿ ಅಂತರಿಕ್ಷ ತಾಣಕ್ಕೆ ಪ್ರಯಾಣಿಸುವರು. ಈ ಸಂಬಂಧ ‘ನಾಸಾ’ ಹೇಳಿಕೆಯನ್ನು ನೀಡಿದ್ದು ಬೋಯಿಂಗ್, ನಾಸಾ ಮತ್ತು ಯುನೈಟೆಡ್ ಲಾಂಚ್ ಅಲೈಯನ್ಸ್‌ನ ಗಗನಯಾತ್ರಿಗಳು ಅಂತರರಾಷ್ಟ್ರೀಯ ಅಂತರಿಕ್ಷ ತಾಣಕ್ಕೆ ಪ್ರಯಾಣಿಸುವರು ಎಂದು ಹೇಳಿದೆ.

ಜೂನ್ 1ರಂದು ಮಧ್ಯಾಹ್ನ 12.25ಕ್ಕೆ ನೌಕೆಯ ಉಡಾವಣೆಯ ಮೊದಲ ಸಾಧ್ಯತೆಗಳಿವೆ. ಉಳಿದಂತೆ ಜೂನ್ 2, 5 ಮತ್ತು 6ರಂದು ಹೆಚ್ಚುವರಿ ಅವಕಾಶಗಳಿವೆ. ಸ್ಟಾರ್‌ಲೈನರ್ ಸಾಮರ್ಥ್ಯದ ಅಂದಾಜು ನಡೆದಿದೆ. ಗಗನಯಾತ್ರಿಗಳ ತಂಡ ಕೂಡಾ ಅಂತರಿಕ್ಷ ನೌಕೆಯ ವಿವಿಧ ತಾಂತ್ರಿಕ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ ಎಂದಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ‘ಸ್ಟಾರ್‌ಲೈನರ್’ ಅಂತರಿಕ್ಷ ನೌಕೆಯು ಅಂತರರಾಷ್ಟ್ರೀಯ ಅಂತರಿಕ್ಷ ತಾಣಕ್ಕೆ ಒಯ್ಯಲಿದೆ. ಫ್ಲಾರಿಡಾದಿಂದ ಈ ನೌಕೆಯ ಉಡಾವಣೆ ಕಾರ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.