ವಾಷಿಂಗ್ಟನ್: ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಆರ್ಯನ್ ರೆಡ್ಡಿ (23) ಎಂದು ಗುರುತಿಸಲಾಗಿದೆ. ಅಟ್ಲಾಂಟಾದ ಜಾರ್ಜಿಯಾದಲ್ಲಿರುವ ಆರ್ಯನ್ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಅಮೆರಿಕ ಪೊಲೀಸರು ತಿಳಿಸಿದ್ದಾರೆ.

ಜನ್ಮದಿನದ ಸಂಭ್ರಮಾಚರಣೆ ವೇಳೆ ನಾಡ ಪಿಸ್ತೂಲ್ಅನ್ನು ಸ್ವಚ್ಛ ಮಾಡುವಾಗ ಈ ಘಟನೆ ಸಂಭವಿಸಿದೆ ಎಂದು ಆರ್ಯನ್ ಗೆಳೆಯರು ತಿಳಿಸಿದ್ದಾರೆ. ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯದರು ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅಟ್ಲಾಂಟಾದ ವಿಶ್ವವಿದ್ಯಾಲಯವೊಂದರಲ್ಲಿ ಆರ್ಯನ್ ಎಂಎಸ್ (ಮಾಸ್ಟರ್ ಆಫ್ ಸೈನ್ಸ್) ಮಾಡುತ್ತಿದ್ದರು. ಅವರು ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು.

ಆರ್ಯನ್ ರೆಡ್ಡಿ ತೆಲಂಗಾಣ ರಾಜ್ಯದ ಭುವನಗಿರಿ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.