ಬೀಜಿಂಗ್/ಸಿಂಗಪುರ: ವಿಶ್ವದಾದ್ಯಂತ ನೆಲೆಸಿರುವ ಭಾರತೀಯರು ಸೋಮವಾರ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸಿದರು.

ಎಲ್ಲೆಡೆರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ, ದೇಶಪ್ರೇಮದ ಗೀತೆಗಳನ್ನು ಹಾಡಿ ದೇಶಭಕ್ತಿ ಮೆರೆದರು.

ಚೀನಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಪ್ರದೀಪ್ ಕುಮಾರ್ ರಾವತ್ ಅವರು ರಾಯಭಾರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಇದೇ ವೇಳೆ ಭಾರತೀಯ ಸಂಸ್ಕೃತಿ ಪಸರಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಲಸಿಗ ಭಾರತೀಯರು ಪ್ರಸ್ತುತಪಡಿಸಿದರು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಬೀಜಿಂಗ್‌ನಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಭಾರತೀಯ ಸಮುದಾಯದವರು ಪಾಲ್ಗೊಂಡಿದ್ದರು.

ದಕ್ಷಿಣ ಚೀನಾದ ಗುಂಜೌ ನಗರದಲ್ಲಿ ಭಾರತೀಯ ಕಾನ್ಸುಲೆಟ್ ಜನರಲ್ ಶಂಭು ಹಕ್ಕಿ ಅವರು ‘ಸಬ್ಸೆ ಪ್ಯಾರಾ ದೇಶ್ ಮೇರಾ’ ಹಾಡನ್ನು ಬಿಡುಗಡೆ ಮಾಡಿದರು.

ಅಮೆರಿಕದ ಬೋಸ್ಟನ್‌ನಲ್ಲಿ ಇದೇ ಮೊದಲ ಬಾರಿಗೆ ನಡೆದ ಇಂಡಿಯಾ ಡೇ ಪರೇಡ್ ಹಾಗೂ 220 ಅಡಿ ಎತ್ತರದಲ್ಲಿ ಹಾರಿಸಿದ ಭಾರತದ ತ್ರಿವರ್ಣ ಧ್ವಜ ಮತ್ತು ಅಮೆರಿಕದ ಧ್ವಜಗಳು ಎಲ್ಲರ ಗಮನ ಸೆಳೆದವು.

ಸಿಂಗಪುರದಲ್ಲಿ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತಭಾರತೀಯ ನೌಕಾಪಡೆಯಸರಯು ಗಸ್ತು ಹಡಗಿನ 16 ಸಿಬ್ಬಂದಿ ದೇಶಭಕ್ತಿ ಗೀತೆಯ ಬ್ಯಾಂಡ್ ನುಡಿಸಿದರು.

ನೇಪಾಳದಲ್ಲಿ ಚಾನ್ಸಲರ್ ಪ್ರಸನ್ನ ಶ್ರೀವಾಸ್ತವ ಅವರು ತ್ರಿವರ್ಣ ಧ್ವಜ ಹಾರಿಸಿದರು. ಇದೇ ವೇಳೆಭಾರತೀಯ ಸಶಸ್ತ್ರ ಪಡೆಗಳ ಹುತಾತ್ಮ ಗೂರ್ಖಾ ಯೋಧರ ಪತ್ನಿಯರು ಮತ್ತು ಅವರ ಕುಟುಂಬದವರಿಗೆರಾಯಭಾರಿ ಕಚೇರಿ ಮೂಲಕ ₹2.65 ಕೋಟಿ ಮೊತ್ತದ ಎನ್‌ಪಿಆರ್ ಬಾಕಿ ವಿತರಿಸಿ, ಗೌರವಿಸಲಾಯಿತು.

ಇಸ್ರೇಲ್‌ನಲ್ಲಿ ಭಾರತೀಯ ರಾಯಭಾರಿ ಸಂಜೀವ್ ಸಿಂಗ್ಲಾ ಅವರು ಟೆಲ್ ಅವೀವ್‌ನ ಹರ್ಜಿಲಿಯಾದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.