ಬಾಲಿ : ಜಿಮ್ನಲ್ಲಿ 210 ಕೆ.ಜಿ ಭಾರದ ಬಾರ್ಬೆಲ್ ಎತ್ತಲು ಪ್ರಯತ್ನಿಸುತ್ತಿದ್ದ ವೇಳೆ ಕುತ್ತಿಗೆ ಮೇಲೆ ಬಿದ್ದು ಫಿಟ್ನೆಸ್ ಟ್ರೈನರ್ ಸಾವನ್ನಪ್ಪಿದ ಘಟನೆ ನಡೆದಿದೆ.

ಜಸ್ಟಿನ್ ವಿಕಿ (33) ಮೃತ ಟ್ರೈನರ್.

ಜಸ್ಟಿನ್, ಭಾರ ಎತ್ತಲು ಪ್ರಯತ್ನಿಸುತ್ತಿದ್ದಾಗ ಬಾರ್ಬೆಲ್ ಸಮತೋಲನ ತಪ್ಪಿ ಕುತ್ತಿಗೆ ಮೇಲೆ ಬಿದ್ದು, ಕುತ್ತಿಗೆ ಮುರಿದಿದೆ. ಇದರಿಂದ ಮೆದುಳಿಗೆ ಸಂಪರ್ಕಿಸುವ ನರಗಳಿಗೂ ಹಾನಿಯಾಗಿದ್ದು, ತಕ್ಷಣವೇ ವಿಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ ಎಂದು ವರದಿ ತಿಳಿಸಿದೆ.

ವಿಕಿಯ ವೇಟ್ಲಿಫ್ಟಿಂಗ್ ಸಮಯದಲ್ಲಿ ನೆರವು ನೀಡಲು ನೇಮಕಗೊಂಡ ವ್ಯಕ್ತಿ ಕೂಡ ತನ್ನ ಸಮತೋಲನವನ್ನು ಕಳೆದುಕೊಂಡಿದ್ದರು.

ವಿಕಿಗೆ ಬಾಲಿಯ ಪ್ಯಾರಡೈಸ್ ಜಿಮ್ ಗೌರವ ನಮನ ಸಲ್ಲಿಸಿದೆ. ಅವರು ಕೇವಲ ಬಾಡಿಬಿಲ್ಡರ್ ಅಲ್ಲ, ಸ್ಪೂರ್ತಿಯ ಚಿಲುಮೆ. ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಫಿಟ್ನೆಸ್ ಮ್ಯಾನ್ ಎಂದು ಹೇಳಿದೆ.

ವಿಕಿ ಬಾರ್ಬೆಲ್ ಎತ್ತುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.