ಕಾಬೂಲ್: ಪೂರ್ವ ಅಫ್ಗಾನಿಸ್ತಾನದಲ್ಲಿ ಸ್ಥಳೀಯ ರೇಡಿಯೊ ಮತ್ತು ಟಿ.ವಿ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಿದ್ದು, ಇದರ ಹೊಣೆಯನ್ನುಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ.

‘ಮಂಗಳವಾರ ಪ್ರತ್ಯೇಕ ದಾಳಿಯಲ್ಲಿ ಮೂವರು ಮಹಿಳೆಯರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ’ ಎಂದು ಸ್ಥಳೀಯ ಟಿ.ವಿ ಸ್ಟೇಷನ್ನ ಸುದ್ದಿ ಸಂಪಾದಕರು ತಿಳಿಸಿದರು.

‘ಈ ಸಂಬಂಧ ಖಾರಿ ಬಸೀರ್ ಎಂಬಾತನನ್ನು ಬಂಧಿಸಲಾಗಿದ್ದು, ಆತ ತಾನು ತಾಲಿಬಾನ್ ಸಂಘಟನೆಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಆದರೆ ತಾಲಿಬಾನ್ ವಕ್ತಾರ ಜಬಿಬುಲ್ಲಾ ಮುಜಾಹಿದ್ ಇದನ್ನು ನಿರಾಕರಿಸಿದ್ದಾರೆ’ ಎಂದು ಅಫ್ಗಾನ್ ಅಧಿಕಾರಿಗಳು ಹೇಳಿದರು.

‘ಈತ ಸೈಲೆನ್ಸರ್ ಒಳಗೊಂಡ ಪಿಸ್ತೂಲ್ ಅನ್ನು ಹತ್ಯೆಗೆ ಬಳಸಿದ್ದಾನೆ. ಹತ್ಯೆ ನಡೆದ ಕೆಲವೇ ಕ್ಷಣಗಳಲ್ಲಿ ಆತನನ್ನು ಜಲಾಲಾಬಾದ್ ಪೊಲೀಸರು ಬಂಧಿಸಿದರು’ ಎಂದು ನಂಗಹಾರ್ರ್ನ ಪೊಲೀಸ್ ಮುಖ್ಯಸ್ಥ ಜನರಲ್ ಜುಮ ಗುಲ್ ಹೇಮತ್ ಅವರು ತಿಳಿಸಿದರು.

‘ಮಂಗಳವಾರ ತಡರಾತ್ರಿ ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಅಫ್ಗಾನ್ ಸರ್ಕಾರದ ಪರವಾಗಿದ್ದ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಕೊಲ್ಲಲಾಯಿತು’ ಎಂದು ಸಂಘಟನೆ ಹೇಳಿದೆ.

ಬುಧವಾರ ಮೂವರು ಮಹಿಳೆಯರ ಅಂತ್ಯಕ್ರಿಯೆ ನಡೆಸಲಾಗಿದ್ದು, ಈ ವೇಳೆ ಹಲವಾರು ಜನರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.