ವಾಷಿಂಗ್ಟನ್: ಇಸ್ರೇಲ್ ವಿರುದ್ಧ ಇರಾನ್ ಉಡಾಯಿಸಿದ್ದ 80ಕ್ಕೂ ಅಧಿಕ ಮಾನವರಹಿತ ವೈಮಾನಿಕ ವಾಹನಗಳು ಹಾಗೂ ಕನಿಷ್ಠ 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶ ಮಾಡಿದ್ದಾಗಿ ಅಮೆರಿಕ ಭಾನುವಾರ ತಿಳಿಸಿದೆ.
.Iran–Israel Conflict: ಇಸ್ರೇಲ್ ಮೇಲೆ ಇರಾನ್ ದಾಳಿ.
ಇದರಲ್ಲಿ ಉಡಾವಣಾ ವಾಹನದಲ್ಲಿದ್ದ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಹುತಿ ಬಂಡುಕೋರರ ವಶದಲ್ಲಿರುವ ಯೆಮನ್‌ನ ಪ್ರದೇಶದಲ್ಲಿ ಉಡಾವಣೆಗೂ ಮುನ್ನವೇ ನಾಶಪಡಿಸಲಾದ 7 ಮಾನವರಹಿತ ವೈಮಾನಿಕ ವಾಹನಗಳೂ ಸೇರಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಏ.1ರಂದು ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇರಾನ್ ಇಸ್ರೇಲ್ ಮೇಲೆ 300ಕ್ಕೂ ಅಧಿಕದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು.
.ಇರಾನ್ ದಾಳಿಯನ್ನು ಮೆಟ್ಟಿನಿಂತ ಇಸ್ರೇಲ್ ರಕ್ಷಣಾ ವ್ಯವಸ್ಥೆ.
ಇರಾನ್ ಹಾರಿಸಿದ್ದ ಎಲ್ಲಾ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಭೂಮಿಗೆ ತಲುಪುವ ಮೊದಲೇ ಇಸ್ರೇಲ್, ಅಮೆರಿಕ ಹಾಗೂ ಮಿತ್ರಪಡೆಗಳು ಹೊಡೆದುರಳಿಸಿತ್ತು.
.ಇಸ್ರೇಲ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.