ಟೋಕಿಯೊ: ರಿನಾ ಗೊನೋಯ್ ಬಾಲ್ಯದಲ್ಲೇ ಜಪಾನ್ ಮಿಲಿಟರಿ ಸೇರುವ ಕನಸು ಕಂಡಿದ್ದವಳು. ಆದರೆ, ಮಿಲಿಟರಿಗೆ ಸೇರಿದ ನಂತರ ಸಹ ಸೈನಿಕರಿಂದ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಅವರು ಯುದ್ಧ ಸಾರಿದ್ದಾರೆ.

ಜಪಾನ್ ಸೇನೆಯಲ್ಲಿನ ಸೈನಿಕರಿಂದ ಆದ ಅನುಭವವನ್ನು ಸಾರ್ವಜನಿಕ ವೇದಿಕೆಯಲ್ಲಿ ನ್ಯಾಯಕ್ಕಾಗಿ ಪ್ರತಿಭಟಿಸುವ ದಿಟ್ಟ ನಿರ್ಧಾರ ರಿನಾ ತೆಗೆದುಕೊಂಡಿದ್ದಾರೆ. 23 ವಯಸ್ಸಿನ ಅವರು ಸೇನೆಯೊಳಗೆ ಅಡಗಿರುವ ಲೈಂಗಿಕ ಕ್ರೌರ್ಯವನ್ನು ಬಹಿರಂಗವಾಗಿ ವಿರೋಧಿಸುವುದು ಅಷ್ಟು ಸುಲಭವಲ್ಲ.

ಅವರ ಜೀವನದ ಘಟನೆಗಳು ಜಪಾನ್ನ ಅನೇಕ ಜನರನ್ನು ಎಚ್ಚರಿಸಿವೆ ಮತ್ತು ಅರಿವು ಮೂಡಿಸಿದೆ.

ಸಹೋದ್ಯೋಗಿ ಸೈನಿಕರಿಂದಾದ ದೌರ್ಜನ್ಯವನ್ನು ಕಳೆದ ವರ್ಷ ಮೊದಲ ಬಾರಿಗೆ ಸಾರ್ವಜನಿಕವಾಗಿ ರಿನಾ ಹೇಳಿದಾಗ ಅವರಿಗೆ ಪ್ರಾಮುಖ್ಯತೆ ಒದಗಿತು.

‘ಇಂಥ ಕೃತ್ಯ ನನಗೆ ಮಾತ್ರ ಎಸಗಿದ್ದರೆ ನಾನು ಸುಮ್ಮನಿರಬಹುದಿತ್ತು. ಆದರೆ, ನಾನು ಈ ಮೂಲಕ ಅನೇಕರ ಭರವಸೆಗಳನ್ನು ಹೆಗಲಲ್ಲಿ ಹೊತ್ತುಕೊಂಡಿದ್ದೇನೆ‘ ಎಂದು ರಿನಾ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

2020ರಲ್ಲಿ ಅಲ್ಲಿನ ಸೇನೆಗೆ ಸೇರಿದ ನಂತರ ತನ್ನ ಮೇಲೆ ಪ್ರತಿ ದಿನ ಸಹ ಸೈನಿಕರು ಬಲಾತ್ಕಾರದಿಂದ ಲೈಂಗಿಕ ಹಸಿವು ತೀರಿಕೊಳ್ಳುತ್ತಿದ್ದರು. ವಿಶ್ರಾಂತಿಗೆಂದು ಹಜಾರದಲ್ಲಿ ನಡೆಯುವಾಗ ಯೋಧರು ಹಿಂದಿನಿಂದ ಒಮ್ಮೆಗೆ ಸೊಂಟವನ್ನು ಜೋರಾಗಿ ಸೆಳೆದು ಹಿಡಿದಿಟ್ಟುಕೊಳ್ಳುತ್ತಾರೆ, ಇಲ್ಲವೇ, ಜೋರಾಗಿ ಹೊಡೆಯುತ್ತಾರೆ. ಖಾಸಗಿ ಅಂಗಗಳನ್ನು ಯಾವುದೇ ಭಯವಿಲ್ಲದೇ ಹಿಸುಕುತ್ತಾರೆ‘ ಎಂದು ರಿನಾ ಅಪಾದನೆಯನ್ನು ಮಾಧ್ಯಮ ಉಲ್ಲೇಖಿಸಿದೆ.

‘ಡ್ರಿಲ್ ಸಂದರ್ಭ ಮೂವರು ಸಹ ಸೈನಿಕರು ನನ್ನನ್ನು ನೆಲಕ್ಕೆ ಕೆಡವಿ ಅಮುಖಿ ಹಿಡಿದು ತಮ್ಮ ದಾಹ ತೀರಿಸಿಕೊಂಡರು‘ ಎಂದೂ ರಿನಾ ಬಹಿರಂಗ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ರಿನಾ ಸರ್ಕಾರದ ಗಮನಕ್ಕೆ ತಂದರೂ, ಸರಿಯಾದ ದಾಖಲೆಗಳಿಲ್ಲ ಎಂದು ಪ್ರಕರಣವನ್ನು ಸರ್ಕಾರ ತಳ್ಳಿ ಹಾಕಿತು.
ಛಲ ಬಿಡದ ರಿನಾ ಜಪಾನ್ ಸೈನಿಕರ ದೌರ್ಜನ್ಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ವಿರೋಧಿಸತೊಡಗಿದರು. ಆಗ ಎಚ್ಚೆತ್ತ ಸರ್ಕಾರ ಪ್ರಕರಣವನ್ನು ಪುನಃ ತೆರೆದು ತನಿಖೆ ಪ್ರಾರಂಭಿಸಿತು. ಬಳಿಕ ರಕ್ಷಣಾ ಸಚಿವಾಲಯ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ ಎಂದು ರಿನಾ ತನ್ನ ಹೋರಾಟದ ದಾರಿ ವಿವರಿಸಿದ್ದಾರೆ.

ಸ್ವತಃ ಮಾಜಿ ಸೈನಿಕರಾಗಿದ್ದು ರಿನಾ ಗೊನೋಯ್ ಜಪಾನ್ ಯೋಧರ ಕುರಿತು ಮಾತನಾಡಿರುವ ವಿಡಿಯೊಕ್ಕೆ ಯು ಟ್ಯೂಬ್ನಲ್ಲಿ ಅಪಾರ ಬೆಂಬಲ ವ್ಯಕ್ತವಾಗಿದೆ. ಮಿಲಿಟರಿಗೆ ವಿದಾಯ ತಿಳಿಸಿರುವ ಅವರು, ಈಗ ಜುಡೊ ಕ್ರೀಡೆಯ ತರಬೇತುಗಾರ್ತಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.