ಹೇಗ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ (49) ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವುನೀಡಿದ್ದ ಮರಣದಂಡನೆ ತೀರ್ಪಿನ ವಿಚಾರದಲ್ಲಿ→ಭಾರತಕ್ಕೆ ಮಹತ್ವದ ಗೆಲುವು ಲಭಿಸಿದೆ. ಪಾಕಿಸ್ತಾನದ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ಬುಧವಾರ ಸೂಚನೆ ನೀಡಿದೆ.

2017ರಲ್ಲಿ ಜಾಧವ್ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಇವರ ವಿಚಾರಣೆನಡೆಸಿದ್ದ ಪಾಕಿಸ್ತಾನದ ಸೇನಾ ನ್ಯಾಯಾಲಯವು, ‘ಜಾಧವ್ ಬಲೂಚಿಸ್ತಾನವನ್ನು ಅಸ್ಥಿರಗೊಳಿಸಲು ದೇಶದೊಳಗೆ ನುಸುಳಿ ಬಂದಿರುವ ಭಾರತೀಯ ಗೂಢಚಾರ’ ಎಂದು ಆರೋಪಿಸಿ, ಅವರಿಗೆ ಮರಣದಂಡನೆ ವಿಧಿಸಿತ್ತು.

ಈ ತೀರ್ಪಿನ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿದ್ದ ಭಾರತವು, ‘ಜಾಧವ್ ಅವರ ವಿಚಾರಣೆಯನ್ನು ನ್ಯಾಯಬದ್ಧವಾಗಿನಡೆಸಿಲ್ಲ. ಪಾಕಿಸ್ತಾನವು ಅವರಿಗೆ ರಾಜತಾಂತ್ರಿಕ ನೆರವನ್ನು ನಿರಾಕರಿಸಿತ್ತು. ಅದು ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗುತ್ತದೆ’ ಎಂದು ವಾದಿಸಿತ್ತು.

ನ್ಯಾಯಾಧೀಶ ಅಬ್ದುಲ್‌ಕ್ವಾವಿ ಅಹ್ಮದ್ ಯೂಸುಫ್ ನೇತೃತ್ವದ 15 ಮಂದಿ ಸದಸ್ಯರ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಕಳೆದ ಫೆಬ್ರುವರಿ ತಿಂಗಳಲ್ಲಿ ಪೂರ್ಣಗೊಳಿಸಿತ್ತು. ಇದಾಗಿ ಐದು ತಿಂಗಳ ಬಳಿಕ ತೀರ್ಪು ಹೊರಬಂದಿದೆ.

15:1 ತೀರ್ಪು

ಅಂತರರಾಷ್ಟ್ರೀಯ ನ್ಯಾಯಾಲಯದ 16 ನ್ಯಾಯಾಧೀಶರ ಪೈಕಿ 15 ಮಂದಿ ಭಾರತದ ಪರ ತೀರ್ಪು ನೀಡಿದ್ದಾರೆ. ಪಾಕಿಸ್ತಾನದ ನ್ಯಾಯಾಧೀಶರೊಬ್ಬರು ಮಾತ್ರ ಭಿನ್ನಮತ ದಾಖಲಿಸಿದ್ದಾರೆ. ಚೀನಾದ ನ್ಯಾಯಾಧೀಶರು ಕೂಡ ಭಾರತದ ಪರವಾಗಿಯೇ ನಿಂತಿದ್ದಾರೆ. ಇದು ಪಾಕಿಸ್ತಾನದ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆ ಇದೆ.

ಇನ್ನಷ್ಟು...

ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆಯಲ್ಲಿ ಪಾಕ್ಗೆ ಮುಖಭಂಗ

‘ಜಾಧವ್ಗೆ ಶಿಕ್ಷೆ ಕಾನೂನುಬಾಹಿರ’

ಕುಲಭೂಷಣ್ ಜಾಧವ್ ಭೇಟಿಯಾದ ತಾಯಿ, ಪತ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.