ಜಲಲಾಬಾದ್, ಅಫ್ಗಾನಿಸ್ತಾನ: ಪೂರ್ವ ಅಫ್ಗಾನಿಸ್ತಾನದಲ್ಲಿ ಕಟ್ಟಡ ನಿರ್ಮಾಣ ಕಂಪನಿಯೊಂದರ ಮೇಲೆ ಬುಧವಾರ ಬೆಳಿಗ್ಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು ಕನಿಷ್ಠ 16 ನೌಕರರು ಮೃತಪಟ್ಟಿದ್ದಾರೆ. ಒಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಂಗರ್ಹಾರ್ ಪ್ರಾಂತ್ಯದಲ್ಲಿ ಮುಂಜಾನೆ ಹಲವು ಗಂಟೆಗಳ ಕಾಲ ನಡೆದ ಸುದೀರ್ಘ ದಾಳಿಯಲ್ಲಿ ಎರಡು ಬಾರಿ ಸ್ಫೋಟ ಕೇಳಿಸಿತು. ತಕ್ಷಣವೇ ಭದ್ರತಾ ಪಡೆಗಳು ದೌಡಾಯಿಸಿ ಸ್ಥಳವನ್ನು ಸುತ್ತುವರಿದವು. ಎಲ್ಲ ಐದು ಮಂದಿ ದಾಳಿಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆಎಂದು ನಂಗರ್ಹಾರ್ ಪ್ರಾಂತ್ಯದ ವಕ್ತಾರ ಅತ್ತಾವುಲ್ಲಾ ಖೊಗ್ಯಾನಿ ತಿಳಿಸಿದ್ದಾರೆ.

ದಾಳಿಕೋರರು ಸ್ಥಳದಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬುಗಳು, ಒಂದು ಕಾರ್ ಬಾಂಬ್ ಹಾಗೂ ಎರಡು ಆತ್ಮಾಹುತಿ ಬಾಂಬ್‌ಗಳನ್ನು ಭದ್ರತಾಪಡೆ ನಿಷ್ಕ್ರಿಯಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಆದರೆ, ನಂಗರ್ಹಾರ್ ಪ್ರಾಂತ್ಯದ ಸ್ಥಳೀಯಾಡಳಿತದ ಸದಸ್ಯ ಅಜ್ಮಲ್ ಓಮರ್ ಹೇಳುವ ಪ್ರಕಾರ, ಈ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಗಾಯಗೊಂಡಿರುವ ಒಂಬತ್ತು ಮಂದಿಯ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.

ಈ ಪ್ರಾಂತ್ಯದಲ್ಲಿ ಐಎಸ್ ಮತ್ತು ತಾಲಿಬಾಲ್ ಉಗ್ರ ಸಂಘಟನೆ ಸಕ್ರಿಯವಾಗಿದ್ದರೂ ಈವರೆಗೆ ಯಾವುದೇ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.