ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರ ವೈಯಕ್ತಿಕ ಫೋನ್ ಕರೆಗಳನ್ನುರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಏಜೆಂಟರು ಕದ್ದಾಲಿಸಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.

ಲಿಜ್ ಟ್ರಸ್ ಅವರು ವಿದೇಶಾಂಗ ಹಾಗೂ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಫೋನ್ ಕರೆಗಳನ್ನು ಕದ್ದಾಲಿಸಲಾಗಿದೆ. ಹಾಗೂ ವೈಯಕ್ತಿಕ ಮೇಸೆಜ್ಗಳನ್ನು ನೋಡಲಾಗಿದೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ಪುಟಿನ್ ಏಜೆಂಟರು ಲಿಜ್ ಟ್ರಸ್ ಅವರ ವೈಯಕ್ತಿಕ ಫೋನ್ಹ್ಯಾಕ್ ಮಾಡಿದ್ದು ಅವರ ಆಪ್ತ ಸ್ನೇಹಿತೆ ಕ್ವಾರ್ಟಿಂಗ್ ಅವರೊಂದಿಗೆ ವಿನಿಮಯವಾಗಿದ್ದ ಖಾಸಗಿ ಸಂದೇಶಗಳನ್ನು ನೋಡಲಾಗಿದೆ ಎಂದು ವರದಿಯಾಗಿದೆ.

ಲಿಜ್ ಟ್ರಸ್ ಅವರು ಬ್ರಿಟನ್ ಮಿತ್ರರಾಷ್ಟ್ರಗಳೊಂದಿಗೆ ನಡೆಸಿದ ಉನ್ನತಮಟ್ಟದ ಮಾತುಕತೆಗಳು, ಉಕ್ರೇನ್ ಯುದ್ಧದ ಬಗ್ಗೆ ನಡೆದ ಸಂಭಾಷಣೆಗಳು ಹಾಗೂ ಶಸ್ತ್ರಾಸ್ತ್ರ ಸಾಗಣಿಕೆಯ ವಿವರಗಳನ್ನು ಕದ್ದಾಲಿಸಲಾಗಿದೆ ಎಂದು ವರದಿಯಾಗಿದೆ.

ಕಳೆದ ಒಂದೂವರೆ ವರ್ಷದಿಂದ ಲಿಜ್ ಟ್ರಸ್ ಅವರ ಸಂದೇಶಗಳನ್ನು ಡೌನ್ಲೋಡ್ ಮಾಡಿಕೊಳ್ಳಲಾಗಿತ್ತು ಎಂದು ಮಾಧ್ಯಮಗಳು ಹೇಳಿವೆ.

ಬ್ರಿಟನ್ ಸರ್ಕಾರದ ವಕ್ತಾರರು ಈ ಘಟನೆ ಬಗ್ಗೆಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.