ಲಂಡನ್: ಆರ್ಥಿಕ ಅಪರಾಧದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ, ಭಾರತಕ್ಕೆ ತನ್ನನ್ನು ಗಡಿಪಾರು ಮಾಡದಂತೆ ಕೋರಿ ಬ್ರಿಟನ್‌ನ ಹೈಕೋರ್ಟ್‌ಗೆ ‘ನವೀಕೃತ ಅರ್ಜಿ’ ಸಲ್ಲಿಸಿದ್ದಾರೆ.

ಭಾರತಕ್ಕೆ ಗಡಿಪಾರು ಮಾಡುವಂತೆ ಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಕಳೆದ ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತಂತೆ ಕ್ರಮ ಕೈಗೊಳ್ಳಲು ಇದ್ದ ಐದು ದಿನಗಳ ಅವಕಾಶ ಕೊನೆಗೊಂಡಿದೆ. ಹೀಗಾಗಿ ಈಗ ‘ನವೀಕೃತ ಅರ್ಜಿ’ ಸಲ್ಲಿಸಿರುವ ಮಲ್ಯ ಪರ ವಕೀಲರು, ಗಡಿಪಾರು ಮಾಡದಿರುವಂತೆ ಮತ್ತೊಮ್ಮೆ ಮನವಿ ಮಾಡಲಿದ್ದಾರೆ.

‘ಮಲ್ಯ ಪರ ವಕೀಲರು ನವೀಕರಿಸಿದ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೈಕೋರ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಮಲ್ಯ, ಭಾರತದಲ್ಲಿ ವಿವಿಧ ಬ್ಯಾಂಕುಗಳಿಗೆ ₹ 9,000 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.