ಕೊಪನ್ಹೇಗನ್: ನೊಬೆಲ್ ಸಾಹಿತ್ಯ ಪ್ರಶಸ್ತಿ ಹಗರಣದ ಕೇಂದ್ರ ವ್ಯಕ್ತಿ ಎನಿಸಿದ್ದ ಫ್ರಾನ್ಸ್ ಮೂಲದ ಜೀನ್ ಕ್ಲಾಡ್ ಅರ್ನಾಲ್ಟ್ ಎಂಬುವರಿಗೆ ಸ್ಟಾಕ್ಹೋಮ್ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ.

ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಮುಖ್ಯ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಇವರ ವಿರುದ್ಧ 7 ವರ್ಷಗಳ ಹಿಂದೆ ಲೈಂಗಿಕ ಕಿರುಕುಳ ಹಾಗೂ ಹಣಕಾಸು ಅವ್ಯವಹಾರ ಆರೋಪ ಹೊರಿಸಲಾಗಿತ್ತು. ಅರ್ನಾಲ್ಟ್ ಅವರಿಗೆ ಮೂರು ವರ್ಷ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಟರ್ ಮನವಿ ಮಾಡಿದ್ದರು.

ಅರ್ನಾಲ್ಟ್ ಅವರು ಸ್ವೀಡಿಷ್ ಅಕಾಡೆಮಿ ಸದಸ್ಯರೊಬ್ಬರನ್ನು ವಿವಾಹವಾಗಿದ್ದಾರೆ. ಈ ಪ್ರಕರಣವು ಪ್ರತಿಷ್ಠಿತಿ ಅಕಾಡೆಮಿಯಲ್ಲಿ ಸಂಚಲನ ಮೂಡಿಸಿತ್ತು. #me too ಅಭಿಯಾನ ಆರಂಭಿಸಿದ್ದ ಹಲವು ಮಹಿಳೆಯರು ಅರ್ನಾಲ್ಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಕಾರಣಕ್ಕಾಗಿ ಅರ್ನಾಲ್ಟ್ ಪತ್ನಿ ಹಾಗೂ ಸಮಿತಿಯ ಕಾರ್ಯದರ್ಶಿ ರಾಜೀನಾಮೆ ನೀಡಿದ್ದರು. ಹೀಗಾಗಿ 2018ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಕಟಿಸದಿರಲು ಅಕಾಡೆಮಿ ನಿರ್ಧರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.