ಟೆಹರಾನ್ : 30 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆ ಹಾಗೂ ಸಹೋದರ ಸೇರಿದಂತೆ 12 ಮಂದಿ ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಅಧಿಕೃತ ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.

ದೇಶದಲ್ಲಿ ನಡೆದ ಅಪರೂಪದ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ. ಆರೋಪಿಯ ಗುರುತು ಪತ್ತೆಯಾಗಿಲ್ಲ. ದಕ್ಷಿಣ-ಮಧ್ಯ ಪ್ರಾಂತ್ಯದ ಕೆರ್ಮನ್‌ನಲ್ಲಿ ಭದ್ರತಾ ಪಡೆಗಳು ಆತನನ್ನು(ಆರೋಪಿ) ಹತ್ಯೆಗೈದಿವೆ ಎಂದು ವರದಿಯಾಗಿದೆ.

ಗುಂಡಿನ ದಾಳಿಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದೆ.

ಇರಾನ್‌ನಲ್ಲಿ ಸಾಮೂಹಿಕ ಹತ್ಯೆಗಳು ಅಪರೂಪ. ಕಳೆದ 2 ವರ್ಷಗಳ ಹಿಂದೆ, ಪಶ್ಚಿಮ ಇರಾನ್‌ನಲ್ಲಿ ಸರ್ಕಾರಿ ಸಂಸ್ಥೆಯೊಂದರ ವಜಾಗೊಂಡ ಉದ್ಯೋಗಿ ಮೂವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದರು.
.ಗುಂಡಿಕ್ಕಿ ಮಗನ ಹತ್ಯೆ: ತಂದೆ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.