ಮೆಕ್ಸಿಕೊ: ಮೆಕ್ಸಿಕೊದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಇತರ 32 ಜನರು ಗಾಯಗೊಂಡಿದ್ದಾರೆ ಎಂದು ಮೆಕ್ಸಿಕೊದ ನಾಗರಿಕ ರಕ್ಷಣಾ ಸಮಿತಿ ತಿಳಿಸಿದೆ. ಮೆಕ್ಸಿಕೊ ರಾಜ್ಯದ ದಕ್ಷಿಣ ಪ್ರದೇಶದ ಮಲಿನಾಲ್ಕೊದಲ್ಲಿ ಈ ಅಪಘಾತ ಸಂಭವಿಸಿದೆ.

ಗುವಾನಾಜುವಾಟೊದ ಸ್ಯಾನ್ ಲೂಯಿಸ್ ಡೆ ಲಾ ಪಾಜ್‌ನಿಂದ ಚಾಲ್ಮಾಗೆ ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಬಸ್ ಪಲ್ಟಿಯಾಗಿದೆ. 14 ಜನರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೆಕ್ಸಿಕೊ ಭದ್ರತಾ ಕಾರ್ಯದರ್ಶಿ ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರಿಗೆ ಅವರ ಸಂಬಂಧಿಕರು ನೀರು ಮತ್ತು ಹೊದಿಕೆಗಳನ್ನು ನೀಡುತ್ತಿರುವ ದೃಶ್ಯಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.