ಬೆಂಗಳೂರು: ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮಾರಿಷಸ್ಗೆ ನಾಲ್ಕು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನ ಮಂತ್ರಿ ಪ್ರವೀಣ್ ಕುಮಾರ್ ಜಗನ್ನಾಥ್ ಅವರು ಗುರುದೇವ್ ಅವರನ್ನು ಸ್ವಾಗತಿಸಿದರು.

ಪ್ರಧಾನಿಯೊಂದಿಗೆ ನಡೆದ ಸಭೆಯಲ್ಲಿ ರವಿಶಂಕರ್, ಮಾರಿಷಸ್ನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು.

ಅಧ್ಯಕ್ಷರನ್ನು ಭೇಟಿ ಮಾಡಿದ ರವಿಶಂಕರ್, ಯುವ ಸಬಲೀಕರಣದ ಮಹತ್ವದ ಬಗ್ಗೆ, ಒತ್ತಡ ನಿವಾರಣಾ ಕಾರ್ಯಕ್ರಮಗಳ ಮೂಲಕ ಸಾಮರಸ್ಯವನ್ನು ಉತ್ಥಾಪಿಸುವ ಕುರಿತು, ಮಾರಿಷಸ್ಗೆ ಆಯುರ್ವೇದದ ಪರಿಚಯ ಹಾಗೂ ವ್ಯಾಪಕ ರೀತಿಯಲ್ಲಿ ಪ್ರಭಾವವನ್ನು ಬೀರುವ ಕೈದಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಿದರು.

ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ನ, ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ.

ಗುರುದೇವರು ಈ ಕುರಿತು ಮಾತನಾಡುತ್ತಾ, 'ಅವರಲ್ಲಿರುವ ನಿಕೃಷ್ಟವಾದ ಗುಣಗಳಿಂದಾಗಿ ಅವರು ಕಾರಾಗೃಹಕ್ಕೆ ಬಂದರು, ಆದರೆ ಆಧ್ಯಾತ್ಮಿಕತೆಯು ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಅವರು ಒಳ್ಳೆಯ ನಾಗರಿಕರಾಗಿ, ಸಮಾಜಕ್ಕೆ ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡುತ್ತಾರೆ' ಎಂದು ಹೇಳಿದರು.

ಜಗತ್ತಿನ ಸಂತೋಷದ ಸೂಚ್ಯಂಕದಲ್ಲಿ ಮಾರಿಷಸ್ ಅನ್ನು ಉನ್ನತ ಸ್ಥಾನದಲ್ಲಿ ಕಾಣ ಬಯಸುತ್ತೇವೆ
ಗುರುದೇವ್

ಗುರುದೇವರ ಪ್ರಥಮ ದಿನದ ಭೇಟಿಯಂದು ನಡೆದ ಸಾರ್ವಜನಿಕ ಸಂಜೆಯಲ್ಲಿ ಜ್ಞಾನ, ಸತ್ಸಂಗ ಹಾಗೂ ಧ್ಯಾನ ನಡೆಯಿತು. ಈ ಸಭೆಯಲ್ಲಿ ಮಾರಿಷಸ್ನ ಸಾವಿರಾರು ಜನರು ಭಾಗವಹಿಸಿದ್ದಲ್ಲದೆ, ಸನ್ಮಾನ್ಯ ಅಧ್ಯಕ್ಷರು, ವಿಪಕ್ಷದ ನಾಯಕರು, ಹಾಗೂ ಪ್ರಮುಖ ಸರ್ಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ್ದ ಇತರ ಗಣ್ಯರೆಂದರೆ ಅಡ್ರೇನ್ ದುವಲ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಭಾರತದ ದೂತಾವಾಸದ ಕಮಿಷನರ್ ಆದ ಶ್ರೀಮತಿ ನಂದಿನಿ ಸಿಂಗ್ಲಾ, ಮಾರಿಷಸ್ನ ಮಾಜಿ ಅಧ್ಯಕ್ಷರ ಪತ್ನಿಯಾದ ಶ್ರೀಮತಿ ಸರೋಜಿನಿ ಜಗನ್ನಾಥ್, ವಿಪಕ್ಷ ನಾಯಕರಾದ ಅರವಿಂದ್ ಬೂಲೆಲೀ, ಅಲನ್ ಗಣೂ, ವಿದೇಶಾಂಗ ಸಚಿವರು, ಸಾರ್ವಜನಿಕ ಸೌಲಭ್ಯಗಳ ಸಚಿವರಾದ ಶ್ರೀ ಬಾಬ್ಬಿ ಹುರೀರಾಮ್, ನಾಗರಿಕ ಸೇವಗಳ ಸಚಿವರಾದ ಶ್ರೀ ಅಂಜೀವ್ ರಾಮ್ಧಾನ್, ಸಹಕಾರ ಸಚಿವರಾದ ನವೀನ್ ರಾಮಯ್ಯೆಡ್ ಮತ್ತು ಆರೋಗ್ಯ ಹಾಗೂ ವೆಲ್ನೆಸ್ನ ಸಚಿವರಾದ ಶ್ರೀ ಕೈಲಾಶ್ ಜಗತ್ಪಾಲ್.

ತಮ್ಮ ನಾಲ್ಕು ದಿವಸಗಳ ಭೇಟಿಯಲ್ಲಿ ರವಿಶಂಕರ್ ಅವರು ಅನೇಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜ್ಞಾನ, ಸಂಗೀತ ಹಾಗೂ ಸತ್ಸಂಗದ ಕಾರ್ಯಕ್ರಮಗಳು ಪೈಲ್ಲಿಸ್, ಗೂಡ್ಲ್ಯಾಂಡ್ಸ್ ಮತ್ತು ವೂಟಾನ್ನಲ್ಲೂ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.